ಕರ್ನಾಟಕ ಲೋಕಾಯುಕ್ತರಿಂದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮ

ಭಾಸ್ಕರ ಪತ್ರಿಕೆ
0

 




ತಿಪಟೂರು: ಕುಪ್ಪಾಳು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ  ತುಮಕೂರಿನ ಲೋಕಾಯುಕ್ತ ಡಿವೈಎಸ್ಪಿ ಉಮಾ ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾರ್ವಜನಿಕರಲ್ಲಿ ತಮ್ಮ ಗ್ರಾಮ ಪಂಚಾಯತಿಗೆ ವ್ಯಾಪ್ತಿ ಬರುವ ಗ್ರಾಮಗಳಲ್ಲಿ ಕಳಪೆ ಕಾಮಗಾರಿಗಳು,ನಮ್ಮ ಸುತ್ತಮುತ್ತಲಿನ ಅನೇಕ ನಿತ್ಯ  ತೊಂದರೆಗಳನ್ನು  ನೀವು ಪ್ರಶ್ನಿಸಿದಾಗ ಮಾತ್ರ ಒಳ್ಳೆ ಕಾರ್ಯಗಳಾಗುತ್ತವೆ. ಇಲ್ಲದಿದ್ದಾಗ ಬ್ರಷ್ಟಾಚಾರ ಲಂಚಗುಳಿತನ ಸ್ವಜನ ಪಕ್ಷಪಾತ ತಾಂಡವಾಡುತ್ತಿರುತ್ತವೆ ಆದ್ದರಿಂದ ತಾವೆಲ್ಲರೂ ಜಾಗೃತರಾಗಿ ತಮ್ಮ ತಮ್ಮ  ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.     ಈ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಾಯತ್ರಿ ಮೈಲಾರಸ್ವಾಮಿ ,ಉಪಾಧ್ಯಕ್ಷೆ ಮಂಜುಳಾ ಸೋಮಶೇಖರ್, ಪಿಡಿಒ ಪ್ರಸನ್ನಾತ್ಮ, ಕಾರ್ಯದರ್ಶಿ ಬಸವಯ್ಯ ಗ್ರಂಥಪಾಲಕ ಪಿ ಶಂಕರಪ್ಪ ಬಳ್ಳೇಕಟ್ಟೆ ಸ್ವಾಗತಿಸಿ ವಂದಿಸಿ ಸಾರ್ವಜನಿಕರು ಸಂವಾದಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*