ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥ ಶ್ರೀಗಳ ಪುರ ಪ್ರವೇಶ

ಭಾಸ್ಕರ ಪತ್ರಿಕೆ
0

ಮೈಸೂರುಅರಕಲಗೂಡು ತಾಲೂಕು ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅವರ 43ನೇ ಚಾತುರ್ಮಾಸ್ಯ ವ್ರತಾನು ಷ್ಠಾನ ಹಾಗೂ ಪುರಪ್ರವೇಶವನ್ನು ಜು.9 ರಂದು ಏರ್ಪಡಿಸಲಾಗಿದೆ ಎಂದು ಅರೇಮಾದನಹಳ್ಳಿ ವಿಶ್ವಕರ್ಮ ಸುಜ್ಞಾನಪ್ರಭು (ಜೆಎಸ್‌ಪಿ) ಟ್ರಸ್ಟ್‌ನ ಲೋಕೇಶ್‌ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ತಿ.ನರಸೀಪುರ ರಸ್ತೆಯ ಚಿಕ್ಕಹಳ್ಳಿಯಲ್ಲಿರುವ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಶಾಖಾ ಮಠದ ಸಮುದಾಯ ಭವನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಪೂರ್ಣಕುಂಭದೊಂದಿಗೆ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಅವರನ್ನು ಮೆರವಣಿಗೆಯಲ್ಲಿ ಚಿಕ್ಕಹಳ್ಳಿ ಶಾಖಾ ಮಠಕ್ಕೆ ಕರೆತರಲಾಗುವುದು. ಜು.10ರಂದು ಪಂಚಾಯತನ ಪೂಜಾ, ವ್ಯಾಸ ಪೂಜಾ ಹಾಗೂ ಗುರು ಪರಂಪರ ಪೂಜಾ ಸಂಕಲ್ಪದೊಂದಿಗೆ ಚಾತುರ್ಮಾಸ್ಯ ವ್ರತ ಪ್ರಾರಂಭಿಸಲಾಗುವುದು. ಸೆ.9 ರವರೆಗೆ ನಿತ್ಯ ಸ್ವಾಮೀಜಿಯವರಿಂದ ಚಾತುರ್ಮಾಸ್ಯ ವ್ರತಾನುಷ್ಠಾನ ಪೂಜೆ ನಡೆಯಲಿದೆ ಎಂದು ತಿಳಿಸಿದರು. ಎರಡು ತಿಂಗಳು ವೇದಘೋಷ, ಪುರಾಣ ವಾಚನ, ಹರಿಕಥೆ, ಭರತನಾಟ್ಯ, ಸಂಗೀತ, ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಹಾಗೂ ನಿತ್ಯ ಭಕ್ತಾದಿ ಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಸಂಖ್ಯೆ ಯಲ್ಲಿ ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಈ ಕಾರ್ಯಕ್ರಮಕ್ಕೆ ಭಾಸ್ಕರ ಪತ್ರಿಕೆ ಪ್ರಧಾನ ಸಂಪಾದಕರು, ರಾಜ್ಯ ವಿಶ್ವಕರ್ಮ ಸಮಾದ ಮುಖಂಡರು ಹಾಗೂ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ. ಭಾಸ್ಕರ್‌ ಮತ್ತು ಭಾಸ್ಕರ ಟಿವಿ ಯೂಟ್ಯೂಬ್‌ ಮಾಧ್ಯಮದ ನಿರೂಪಕರು ಹಾಗೂ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ ತುಮಕೂರು ಘಟಕದ ಮಹಿಳಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಶುಭ ವಿಶ್ವಕರ್ಮ ರವರು ಶುಭ ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*