ತಿಪಟೂರು: ವಿಶ್ವಕರ್ಮ ಜಗದ್ಗುರು ಪೀಠ ಅರೆ ಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಮಠ ಮತ್ತು ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಜಿಗಳವರ ಸಾನಿಧ್ಯದಲ್ಲಿ ಶ್ರೀ ವಿಶ್ವಾಸ ನಾಮ ಸಂವತ್ಸರದ ಜಾತ್ರಾ 43ನೇ ಚಾತುರ್ಮಾಸ್ಯ ವತೃನುಷ್ಟಾನ ಕಾರ್ಯಕ್ರಮ ಬಹಳ ಅದ್ದೂರಿಯಿಂದ ಮೈಸೂರು ಜಿಲ್ಲೆಯ ಚಿಕ್ಕಹಳ್ಳಿ ಗ್ರಾಮದ ವಿಶ್ವಕರ್ಮ ಸಮಾಜದ ಭವನದಲ್ಲಿ 10/07 /2025 ಗುರುವಾರದಿಂದ 07/ 09/ 2025 ಭಾನುವಾರದವರೆಗೂ ಚಾತುರ್ಮಾಸ ಕಾರ್ಯಕ್ರಮವು ಜರುಗಲಿದೆ. ಈ ಕಾರ್ಯಕ್ರಮವು ಪ್ರತಿ ವರ್ಷದಂತೆ ಈ ವರ್ಷವು ಆಷಾಢ ಶುಕ್ಲ ವ್ಯಾಸ ಪೂರ್ಣಿಮಾ ದಿನಾಂಕ 10/ 07/ 2025 ಗುರುವಾರದಂದು ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಿ ಶ್ರೀವಾಸ್ಯ ಪೂಜಾ ಅಂದರೆ ಶ್ರೀ ಕೃಷ್ಣ ಪಂಚಕ, ಶ್ರೀ ವ್ಯಾಸ ಪಂಚಕ, ಶ್ರೀ ಶಂಕರ ಪಂಚಕಗಳೊಂದಿಗೆ ಗುರುಂಪಾರಂಪರಾ ಪೂಜೆಗಳನ್ನು ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನೆರವೇಲಿದ್ದು. ಎಂದಿನಂತೆ ಶ್ರೀ ವಿಶ್ವಕರ್ಮ ಸ್ವಾಮಿ, ಶಿವ ಪಂಚಾಂಗ ಯುತ, ಶ್ರೀಚಕ್ರ ಪೂಜೆಗಳು ಜರುಗುತ್ತವೆ, ಈ ಕಾರ್ಯಕ್ರಮದ ವೇದಿಕೆಯಲ್ಲಿ ಆಸೀನರಾಗಿರುವ ವಿಶ್ವಕರ್ಮ ಸಮಾಜದ ಮುಖಂಡರುಗಳಿಗೂ ಸ್ವಾಮೀಜಿಗಳು ಸನ್ಮಾನ ಮಾಡಲಾಯಿತು.
ಅದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರಾದ ಹಿರಿಯ ಪತ್ರಕರ್ತರು ಹಾಗೂ ಸಂಪಾದಕರಾದ ಡಾ. ಭಾಸ್ಕರ್ ಅವರಿಗೆ ಹೃದಯಪೂರ್ವಕವಾಗಿ ಗೌರವಿಸಿ ಸನ್ಮಾನಿಸಲಾಯಿತು. ನಂತರ ಪರಮಪೂಜ್ಯ ಅನಂತ ಶ್ರೀ ಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿಯವರು ಡಾ! ಭಾಸ್ಕರ್ ಬಗ್ಗೆ ಮಾತನಾಡುತ್ತಾ 1992ನೇ ಸಾಲಿನಲ್ಲಿ ಭಾಸ್ಕರ್ ಪತ್ರಿಕೆಯನ್ನು ಆರಂಭಿಸಿ, ಪತ್ರಿಕಾ ರಂಗಕ್ಕೆ ಪಾದಾರ್ಪಣೆ ಮಾಡಿ ಪತ್ರಿಕಾ ರಂಗ ಕ್ಷೇತ್ರಗಳಲ್ಲಿ ಸಮಾಜದ ಅಂಕುಡೊಂಕುಗಳುನ್ನ ತಿದ್ದುವ ಕೆಲಸವನ್ನು ಪತ್ರಿಕಾ ರಂಗದಲ್ಲಿ ಸುಮಾರು ವರ್ಷ ಸೇವೆ ಸಲ್ಲಿಸತ್ತಾ ಬಂದಿದ್ದು. ನಾವು ಕೂಡ ಇವರ ಪತ್ರಿಕೆ ಉದ್ಘಾಟನೆಗೆ ಭಾಗಿಯಾಗಿದ್ದೆವು ಅಗಲೇ 25ನೇ ವರ್ಷದ ವಜ್ರಮಹೋತ್ಸವವನ್ನು ಆಚರಿಸಲಾಗಿತ್ತು. ಇಂದು ತಿಪಟೂರಿನಲ್ಲಿ ಭಾಸ್ಕರ್ ಪತ್ರಿಕೆ ಹಾಗೂ ಯುಟ್ಯೂಬ್ ಚಾನೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿದ್ದು. ಪತ್ರಿಕಾ ರಂಗದಲ್ಲಿ ಅನೇಕ ಸೇವೆ ಸಲ್ಲಿಸಿದ ಕಾರಣ ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು. ಮಹಾ ಸ್ವಾಮಿಯವರು ಇವರ ಪತ್ರಿಕೆಯ ಅನುಭವದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅನೇಕ ಸಮಾಜದ , ಗಣ್ಯರು ವಿಶ್ವಕರ್ಮದ ಸಮಾಜದ ಮುಖಂಡರುಗಳು ಉಪಸ್ಥಿತಿಯಲ್ಲಿದ್ದರು.

