43ನೇ ಚಾತುರ್ಮಾಸ ಕಾರ್ಯಕ್ರಮ

ಭಾಸ್ಕರ ಪತ್ರಿಕೆ
0

ಮೈಸೂರು: ಗುರು ಪೌರ್ಣಮಿ ಅಂಗವಾಗಿ ದಿನಾಂಕ 10.07.2025ನೇ ಗುರುವಾರ ಅರೆ ಮಾದನಹಳ್ಳಿ ವಿಶ್ವ ಬ್ರಾಹ್ಮಣ ಸಂತಾನ ವತಿಯಿಂದ ಮೈಸೂರಿನ ಶಾಖ ಮಠದ ಚಿಕ್ಕಳ್ಳಿ ಗ್ರಾಮದಲ್ಲಿ ಶ್ರೀ  ಶ್ರೀ ಶಿವಸು ಜ್ಞಾನ ತೀರ್ಥ ಮಹಾಸ್ವಾಮೀಜಿಗಳು 42ನೇ ಚಾತುರ್ಮಾಸವನ್ನು  ಆಚರಿಸಿದರು,  ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
ಈಶ್ವರಚಾರ್ ವಿಶ್ವಕರ್ಮ ಸಮಾಜದ ಅಧ್ಯಕ್ಷರು, ಬಾಬು ಪತ್ತಾರ್ ಕಾರ್ಯಾಧ್ಯಕ್ಷರು, ಉಮೇಶ್ ಗೌರವಾಧ್ಯಕ್ಷರು, ಈಶ್ವರ್ ವಿಶ್ವಕರ್ಮ ಮುಖಂಡರು, ಡಾಕ್ಟರ್  ಉಮೇಶ್ ವಿಶ್ವಕರ್ಮ ಸೇವಾ ಪ್ರತಿಷ್ಠಾನ ಮುಖಂಡರು, ಕೇಶವಾಚಾರ್, ಹರೀಶ್ ಹಾಸನ  ಜಿಲ್ಲಾಧ್ಯಕ್ಷರು, ಮರಿಯಾಚಾರ್,  ಲಿಂಗ ಆಚಾರ್,  ಡಾಕ್ಟರ್ ಭಾಸ್ಕರಾಚಾರ್  ಪತ್ರಿಕೆ ಸಂಪಾದಕರು ಹಾಗೂ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು,  ಸವಿತಾ ಶಾಸ್ತ್ರಿ ನಿಗಮ ಮಂಡಳಿ ರಾಜ್ಯ ನಿರ್ದೇಶಕರು ಹಾಗೂ ಮೈಸೂರಿನ ಸುತ್ತಮುತ್ತಲಿನ ಮುಖಂಡರುಗಳು ಮತ್ತು ಮಂಗಳೂರು ಹಾಗೂ ಬೆಂಗಳೂರು ನಗರದ ಮುಖಂಡರುಗಳು,  ಗೋಲ್ಡ್ ಲಯನ್ ಟಿ. ಸುರೇಶ್ ರವರು ಭಾಗವಹಿಸಿ ಚಾತುರ್ ಮಾಸದ ಕಾರ್ಯಕ್ರಮವನ್ನು ಯಶಸ್ವಿ ಮತ್ತು ಸ್ವಾಮೀಜಿಗಳಿಂದ ಆಶೀರ್ವಚನವನ್ನು ಪಡೆದಿದ್ದಾರೆ ಸಮಾಜ  ಒಗ್ಗಟ್ಟಿನಿಂದ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು  ತೋರಿಸಿಕೊಟ್ಟಿದ್ದಾರೆ.

ಸಮಾಜದ ಮುಖಂಡರುಗಳಾದ ಬಾಬು ಪತರ್ ಮಾತನಾಡಿ ಸಮಾಜ ಹಲವಾರು ಕಸುಬುಗಳನ್ನು ಮಾಡುತ್ತಾ ಬಂದಿದ್ದು ಒಗ್ಗಟ್ಟಿನ ಕೊರತೆಯಿಂದ   ಸರ್ಕಾರದಿಂದ ಯಾವುದೇ ಸಲುವತ್ತುಗಳನ್ನು ಪಡೆಯಲು ವಿಫಲವಾಗಿದ್ದೇವೆ ರಾಜಕೀಯದಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ ಮತ್ತು ಜನಗಣತಿಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ವಿಶ್ವಕರ್ಮ ಎಂದು ನಮೂದಿಸಬೇಕು ಎಂದು ಹೇಳಿದ್ದಾರೆ.
 ಇದೇ ಸಂದರ್ಭದಲ್ಲಿ ಸ್ವಾಮೀಜಿಗಳ  ಆಶೀರ್ವಾದ ಪಡೆದು 43ನೇ ಚಾತುರ್ಮಾಸದ ಈ ಶುಭ ಸಂದರ್ಭದಲ್ಲಿ ಸಮಾಜಗಳಲ್ಲಿ ಪತ್ರಿಕೆ ನಡೆಸಿಕೊಂಡು ಬರುವುದು ಕಷ್ಟವಿದೆ ಆದರೂ ಭಾಸ್ಕರ್ ಪತ್ರಿಕೆಯ ಭಾಸ್ಕರ ಅವರು 35 ವರ್ಷಗಳಿಂದ  ತಾವೇ ಪ್ರಾರಂಭಿಸಿ  ಇದೀಗ ಮೂರನೇ ವರ್ಷಕ್ಕೆ ಕಾಲಿಟ್ಟ ಭಾಸ್ಕರ್ ಅವರು ಇದೀಗ ಸಮಾಜದ  ಹೇಳಿಗೆಗೆ ದುಡಿಯುತ್ತಿದ್ದಾರೆ ಇವರಿಂದ ಸಮಾಜಕ್ಕೆ ಒಳಿತಾಗಲೆಂದು ಎಲ್ಲರೂ ಹಾರೈಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*