
ಗಂಗಾವತಿ: ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವಿರುಪಾಕ್ಷಿಗೌಡ ನಾಯಕ ಅವರು ತಮ್ಮ ಜನ್ಮದಿನದ ಅಂಗವಾಗಿ ನಗರದ ಲಯನ್ಸ್ ಬುದ್ಧಿಮಾಂಧ್ಯ ಮಕ್ಕಳಿಗೆ ಡ್ರಾಯಿಂಗ್ ಬುಕ್, ಸ್ಕೆಚ್ ಪೆನ್ಸಿಲ್ ನೀಡುವುದರ ಮೂಲಕ ಹಾಗೂ ೬೦ ಹಾಸಿಗೆ ಹೆರಿಗೆ ಆಸ್ಪತ್ರೆಯಲ್ಲಿ ಹಣ್ಣು ಬ್ರೆಡ್ ವಿತರಣೆ ಮೂಲಕ ಮತ್ತು ನವ ಜೀವನ ವೃದ್ರಾಶ್ರಮದಲ್ಲಿ ವಯೋವೃದ್ಧರಿಗೆ ಹಣ್ಣು ಹಾಗೂ ಊಟ ವಿತರಣೆ ಮೂಲಕ ಆಚರಣೆ ಮಾಡಿಕೊಂಡರು.
ನAತರ ಅವರು ಗಂಗಾವತಿ ಪ್ರವಾಸಿ ಮಂದಿರದಲ್ಲಿ ಶ್ರೀಯುತ ವಿರುಪಾಕ್ಷಿಗೌಡ ನಾಯಕ ಇವರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಪರಸಪ್ಪ ನಾಯಕ ಹಾಗೂ ಗಂಗಾವತಿ ನಗರ ಘಟಕದ ಉಪಾಧ್ಯಕ್ಷರನ್ನಾಗಿ ಹುಲಿಗೇಶ್, ಹೊಸಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಹಾಗೂ ವಿಜಯನಗರ ಜಿಲ್ಲಾ ಅಧ್ಯಕ್ಷರಾದ ರಾಜು ಗುಜ್ಜಲ್ ಹಾಗೂ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು, ಕೊಪ್ಪಳ ಜಿಲ್ಲಾ ಘಟಕ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು. ಹಾಗೂ ಇನ್ನೂ ಅನೇಕರು ಪಾಲ್ಗೊಂಡಿದ್ದರು.
