ಹುಬ್ಬಳ್ಳಿ: ದಿನಾಂಕ 8-11-2024 ರ ಬೆಳಗಿನಜಾವ 3.30 ಗಂಟೆಯಲ್ಲಿ ರಾಹುಲ್ ಎಂಬುವರು ಕಾರಿನಲ್ಲಿ ಬರುತ್ತಿರುವಾಗ ಸುಮಾರು ಹತ್ತರಿಂದ ಹನ್ನೆರಡು ಜನರು ಎರಡು ವಾಹನದಲ್ಲಿ ಬಂದು ರಾಹುಲ್ ಕಾರ್ ಅಡ್ಡಗಟ್ಟಿ ಹಣ ಹಾಗೂ ಮೊಬೈಲ್ ಹಾಗೂ ಇತರ ಪರೀಕರಗಳನ್ನು ದರೋಡೆ ಮಾಡಿದ್ದು,ಈ ಬಗ್ಗೆ ಹುಬ್ಬಳ್ಳಿ ನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳ ಪತ್ತೆ ಹಚ್ಚುವ ನಿಟ್ಟಿನಲ್ಲಿ ಸಿಸಿಬಿ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳನ್ನು ತಂಡಗಳನ್ನಾಗಿ ನೇಮಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳಾದ ಫಾರುಕ್ ಮಾಸ್ತಿಕಟ್ಟೆ ಉಲ್ಲಾಳ,ದಕ್ಷಿಣ ಕನ್ನಡ ಹಾಗೂ ಭರತ ಕುಮಾರ್ ಶೆಟ್ಟಿನಿಂತಿಕಲ್ಲು,ಬೆಳಾಲು ವಿಲೇಜ್,ಬೆಳ್ತಂಗಡಿ ತಾಲೂಕು ಇವರನ್ನು ದಸ್ತಗಿರಿ ಮಾಡಿದ್ದಾಗಿರುತ್ತದೆ.
ಇಂದು ಆರೋಪಿಗಳು ಕೃತ್ಯ ನಡೆದ ಸ್ಥಳ ಮಹಜರು ನಡೆಸಲು ಪಂಚರೊಂದಿಗೆ ತೆರಳಿದ್ದಾಗ ಆರೋಪಿಗಳು ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸೂಕ್ತ ಎಚ್ಚರಿಕೆ ನೀಡಿ ಶರಣಾಗಲು ಸೂಚಿಸಿದರೂ ಕೂಡ ತಪ್ಪಿಸಿಕೋಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ, ಘಟನೆಯಲ್ಲಿ ಗಾಯಗೊಂಡ ಧಾರವಾಡ ಶಹರ ಪೊಲೀಸ್ ಠಾಣೆಯ ಪಿಎಸ್ಐ ಸ್ವಾತಿ ಮುರಾರಿ, ಸಿಸಿಬಿಯ ಮಹಾಂತೇಶ್ ಮಾದರ್, ಶ್ರೀಕಾಂತ ತಲ್ಲೂರ ಹಾಗೂ ಗಾಯಗೊಂಡ ಆರೋಪಿಗಳನ್ನ ಕಿಮ್ಸ್ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.


