ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ರ ಸಿಬಿಐ ನಿಲುವಿಗೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ

ಭಾಸ್ಕರ ಪತ್ರಿಕೆ
0


ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅವರ ಬಗ್ಗೆ ಸಿಬಿಐ ನಿಲುವಿಗೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮುಂಬೈ ಭಯೋತ್ಪಾದನಾ ಪ್ರಕರಣದ ಆರೋಪಿ ಅಜ್ಮಲ್ ಕಸಬ್ ಗೂ ನ್ಯಾಯಯುತ ವಿಚಾರಣೆಯ ಅವಕಾಶ ಲಭಿಸಿದ ಸ್ಥಳವಾಗಿದೆ ಈ ಸುಪ್ರೀಂ ಕೋರ್ಟ್ ಎಂಬುದು ನಿಮಗೆ ಗೊತ್ತಿರಲಿ ಎಂದು ಸುಪ್ರೀಂ ಕೋರ್ಟ್ ಖಾರವಾಗಿ ಹೇಳಿದೆ. ಯಾಸೀನ್ ಮಲಿಕ್ ಗೆ ನೇರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಹಾಜರಾಗುವುದಕ್ಕೆ ಅನುಮತಿ ನೀಡಬಾರದು ಎಂದು ಹೇಳಿ ಸಿಬಿಐ ಸುಪ್ರೀಂ ಕೋರ್ಟ್ ನ ಬಾಗಿಲು ಬಡಿದಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸುತ್ತಾ ಸುಪ್ರೀಂ ಕೋರ್ಟ್ ಹೀಗೆ ಉತ್ತರ ನೀಡಿದೆ.

1990ರಲ್ಲಿ ನಾಲ್ಕು ಮಂದಿ ಏರ್ ಫೋರ್ಸ್ ಅಧಿಕಾರಿಗಳ ಹತ್ಯೆಯ ಆರೋಪ ಯಾಸಿನ್ ಮಲಿಕ್ ಮೇಲಿದೆ. ಹಾಗೆಯೇ 1989ರಲ್ಲಿ ರುಬಿಯ ಸಈದ್ ಅವರನ್ನು ಅಪಹರಿಸಿಕೊಂಡು ಹೋದ ಆರೋಪವೂ ಇವರ ಮೇಲಿದೆ. ಇದರ ವಿಚಾರಣೆಗೆ ನೇರವಾಗಿ ತನ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಯಾಸಿನ್ ಮಲಿಕ್ ಕೋರಿಕೊಂಡಿದ್ದರು. ಇದನ್ನು ಜಮ್ಮು-ಕಾಶ್ಮೀರದ ಹೈಕೋರ್ಟ್ ಒಪ್ಪಿಕೊಂಡಿತ್ತು. ಆದರೆ ಸಿಬಿಐ ಇದರ ವಿರುದ್ಧ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು..

ಇದೇ ವೇಳೆ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಅಪರಾಧಕ್ಕಾಗಿ ಯಾಸಿನ್ ಮಲಿಕ್ ಅವರು ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*