ಸಿ. ಪಿ ಯೋಗೇಶ್ವರ್‌ ಪುತ್ರನಿಂದ ತಂದೆಯ ಮೇಲೆ ದೂರು

ಭಾಸ್ಕರ ಪತ್ರಿಕೆ
0

 



ಬೆಂಗಳೂರು: ತನ್ನ ಸಹಿ ನಕಲು ಮಾಡಿದ್ದಾರೆಂದು ಆರೋಪಿಸಿ ಸಿ. ಪಿ ಯೋಗೇಶ್ವರ್‌ ಪುತ್ರ ಶ್ರವಣ್ ತಂದೆಯ ವಿರುದ್ಧವೇ ದೂರು ದಾಖಲಿಸಿದ್ದಾರೆ. ಪುತ್ರ ಶ್ರವಣ್ ಯೋಗೇಶ್ವರ್ ನೀಡಿದ ದೂರಿನ ಅನ್ವಯ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಇದು ಬೆಂಗಳೂರಿನ ಮನೆಗೆ ಸಂಬಂಧಿಸಿದ ವಿಚಾರವಾಗಿದ್ದು, ಶ್ರವಣ್ ಸಹಮತ ಇಲ್ಲದೇ, ಅವರ ಅನುಪಸ್ಥಿತಿಯಲ್ಲಿ ಯೋಗೇಶ್ವರ್ ಸಹಿ ಮಾಡಿರೋ ಆರೋಪ ಕೇಳಿ ಬಂದಿದೆ. 

ಹೌದು ಸಿ. ಪಿ ಯೋಗೇಶ್ವರ ಅವರ ಮೊದಲ ಪತ್ನಿ ಮಂಜುಳಾ ಮತ್ತು ಪುತ್ರ ಶ್ರವಣ್​ ಅವರು ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದರು. ಈ ಮನೆ ಸಿ. ಪಿ ಯೋಗೇಶ್ವರ್ ಮೊದಲ ಪತ್ನಿ ಹಾಗೂ ಶ್ರವಣ್ ಹೆಸರಲ್ಲಿದೆ. ಶ್ರವಣ್ ಹಾಗೂ ಆತನ ತಾಯಿ ಮಂಜುಳಾ ಇಬ್ಬರೂ ಸೇರಿ ಮನೆಯನ್ನು ನಿಶಾ ಯೋಗೇಶ್ವರ್ ಗೆ ಉಡುಗೊರೆಯಾಗಿ ನೀಡಿದ್ದರು.

ಅಮ್ಮ ಮತ್ತು ನಾನು ಯಾವುದೇ ತಕರಾರಿಲ್ಲದೇ ಮನೆಯನ್ನು ನಿಶಾಗೆ ಉಡುಗೊರೆಯಾಗಿ ನೀಡಿದ್ದೆವು 
ಅಕ್ಟೋಬರ್ 2024ರಲ್ಲಿ ​ನಮ್ಮ ತಂದೆಯ ಪಿಎ ಮೂಲಕ ನನಗೆ ಒಂದು ಡ್ರಾಫ್ಟ್​​ ಬಂತು. ಅದು ಆ ಮನೆಯ ಭಾಗದ ವಿಚಾರಕ್ಕೆ ಸಂಬಂಧಿಸಿದ್ದಾಗಿತ್ತು.
ಆ ಮನೆಯ ಭಾಗ ಕೇಳಿ, ನಾನು ನನ್ನ ತಾಯಿ ಮತ್ತು ಸಹೋದರಿ ನಿಶಾ ವಿರುದ್ಧ ಕೇಸ್​ ಹಾಕುವುದಕ್ಕೆ ಸಂಬಂಧಿಸಿದ್ದಾಗಿತ್ತು. ನಾನು ಯಾವುದೇ ಗಿಫ್ಟ್ ನೀಡಿಲ್ಲ, ಅದರಲ್ಲಿ ನನಗೆ ಪಾಲು ಬೇಕು ಎಂದು ಬರೆಯಲಾಗಿತ್ತು. ಇದಕ್ಕೆ ನಾನು ಒಪ್ಪಿರಲಿಲ್ಲ. ಅಲ್ಲದೇ ತಂದೆಗೂ ಕೂಡ ನನ್ನ ಒಪ್ಪಿಗೆ/ಅನುಮತಿ ಇಲ್ಲವೆಂದೂ ಹೇಳಿದ್ದೆ. ಆಗ ನನ್ನ ತಂದೆ ಸಿ ಪಿ ಯೋಗೇಶ್ವರ್​ ನಾನು ನೋಡಿಕೊಳ್ತೇನೆ ಬಿಡು ಎಂದಿದ್ದರು. 
ಈಗ ನನ್ನ ತಂದೆಯೇ  ಆ ಡ್ರಾಪ್ಟ್ ಗೆ ಸಹಿ ಮಾಡಿ ನಾನು ಪಾಲು ಕೇಳಿರುವಂತೆ ಕೇಸ್​ ದಾಖಲಿಸಿದ್ದಾರೆ,
ಅಂದರೆ ನನ್ನ ಹೆಸರಿನಲ್ಲಿ ಅಮ್ಮ ಮತ್ತು ಸಹೋದರಿ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಇದರ ವಿರುದ್ಧ ನಾನು ಕೋರ್ಟ್ ಮೊರೆ ಹೋಗಿದ್ದೇನೆ. ನಾನು ಯಾವುದೇ ಸಹಿ ಮಾಡಿಲ್ಲ. ಮನೆಯಲ್ಲಿ ಭಾಗವನ್ನೂ ಕೇಳಿಲ್ಲ ಎಂದು ದೂರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*