ಅಮರಶಿಲ್ಪಿ* ಜಕಣಾಚಾರ್ಯರ ಸಂಸ್ಮರಣಾ *ದಿನಾಚರಣೆ :
ಜನವರಿ:1:2025.
ರಾಜ್ಯ ಸರ್ಕಾರವು ಜನವರಿ :1 :2021 ರಿಂದ ಅಮರಶಿಲ್ಪಿ ಜಕಣಾ ಚಾರ್ಯರ ಸಂಸ್ಮರಣಾ ದಿನವೆಂದಾಚರಿಸಲು ಘೋಷಿಸಿ ಸಮಾಜದೊಂದಿಗೆ ಸೇರಿಕನ್ನಡ ಸಂಸ್ಕೃತಿ ಇಲಾಖೆಯಿಂದಲೇ ಅಮೋಘ, ಅಪೂರ್ವ ದಿನವನ್ನಾಗಿ ಆಚರಿಸಲು ಘೋಷಿಸಿ ಇಂದಿಗೆ4ವರ್ಷ ತುಂಬಿ
5 ನೇವರ್ಷ ಕ್ಕೆ ಮುನ್ನಡೆ ಯುತ್ತಿರುವುದಕ್ಕೆ ಶುಭಾಶಯಗಳು.
ವಾಸ್ತು ಶಿಲ್ಪದ ಅಧಿನಾಯಕ, ಮೇರುಪುರುಷ, *ಶಿಲ್ಪಶಾಸ್ತ್ರದ ರುವಾರಿ, ಸ್ವಯಂಭೂಶಿಲ್ಪಿ,
ಶಿಲಾಶಿಲ್ಪದನೂರಾರು ದೇವಾಲಯಗಳ ಸ್ಥಪತಿ, ಸೌಂದರ್ಯೋಪಾಸಕ, ಯಾರ ಶಿರದಲ್ಲಿ ವಿದ್ಯಾರತ್ನ ವಿರುವುದೋ ಅವರುಸುಮ್ಮನೇ ಕೂರದೇ ತನ್ನ ಪ್ರತಿಭೆ ಯಿಂದ ಶಿಲಾಶಿಲ್ಪಗಳನ್ನು ನಿರ್ಮಿಸಿ ಅಜರಾಮರ ವಾಗಿರುತ್ತಾರೆ ಎಂಬುದಕ್ಕೆ ಅಮರಶಿಲ್ಪಿ ಜಕಣಾಚಾರ್ಯರೇ ಜೀವಂತಸಾಕ್ಷಿ. 11 ನೇ ಶತಮಾನದ ಆದಿಯಲ್ಲಿ ಈಗಿನ ತುಮಕೂರಿನ ಅಂದಿನ ಕ್ರೀಡಾಪುರ ಇಂದಿನ ಕೖದಾಳ ಗ್ರಾಮದ ನಾಗಲಿಂಗ ಸ್ಥಪತಿ,ವೖಶ್ವಕರ್ಮಣ ವಂಶದ ಶಿಲ್ಪಿಸಂಜಾತನಾಗಿ ಪ್ರತ್ನಸ ಗೋತ್ರದಲ್ಲಿ ಹುಟ್ಟಿದ ಏಕೖಕ ಸುಪುತ್ರನೇ ಈ ಜಕಣಾಚಾರ್ಯ. ಈತ ತಂದೆಯ ವೃತ್ತಿಯನ್ನೆ ಅಭ್ಯಾಸ ಮಾಡಿದ. ಈತನ ಪತ್ನಿ ಸೌಪರ್ಣಾದೇವಿ ಇವರಿಗೆಬಹುಕಾಲದ ವರೆಗೆ ಮಕ್ಕಳಿಲ್ಲದ ಕಾರಣ ಪುತ್ರ ರತ್ನನಿಗಾಗಿ ಆನೆಗೊಂದಿ ಸರಸ್ಪತಿ ಪೀಠಾಧಿಕಾರಿ ಸಾನಗಗೋತ್ರಜರಾದ ಬ್ರಹ್ಮಾನಂದ ಸ್ವಾಮಿಗಳ ದರ್ಶನಾಶೀರ್ವಾದ ದಿಂದ ಡಕಣಾಚಾರ್ಯ ನೆಂಬ ಪುತ್ರ ಪ್ರಾಪ್ತಿಯಾಯ್ತು. ಜಕಣಾಚಾರ್ಯ ಶಿಲ್ಪ ಶಾಸ್ತ್ರ ವನ್ನು ಕಣ್ಣಲ್ಲಿ ಕಂಡು, ಮನದಲ್ಲಿ ಊಹಿಸಿ, ಕೖಯಿಂದ ನಿರ್ಮಿಸುವ ಕಲಾಶ್ರೀಮಂತಿಕೆಯಲ್ಲಿ, ಕುಸುರೀಕೆಲಸವನ್ನು ಸೃಷ್ಟಿಸುವುದೇ ಜಕಣಾಚಾರ್ಯರ ಮುಖ್ಯ ಉದ್ದೇಶ-ಗುರಿ. ಸೀತೆಗೆ ಬಂದ ಅಪವಾದ ದಂತೆ ಅತಿಯಾಗಿ ಪ್ರೀತಿಸುತ್ತಿದ್ದ ತನ್ನಪತ್ನಿ , ಮಗ, ಮನೆ, ತೊರೆದು ದೇಸಿಗನಾಗಿ ಹೊರಟು ತನ್ನ ಆಯಸ್ಸನ್ನು ದೇವಾಲಯ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ತಾನು ತೋಡಗಿಸಿಕೊಂಡರು. ಸೌಂದರ್ಯೌಪಾಸಕರಾಗಿದ್ದ ಇವರು ಕಲಾಸೃಷ್ಟಿಯಲ್ಲಿ ಸತ್ಯ ದ ದಾರಿತೋರಿದರು. ಕೃತಯುಗ, ತ್ರೇತಾಯುಗ, ದ್ವಾಪರಯುಗದ ದೖವಶಿಲ್ಪಿ* ವಿರಾಟ್ ವಿಶ್ವಕರ್ಮ ನಾದರೇ *ಕಲಿಯುಗದ ಶಿಲ್ಪಿ*ಜಕಣಾಚಾರ್ಯ. ಎನ್ನುವ ಮಾತು ಸತ್ಯ ವಾದುದು. ಯಾವ ಪದವೀಶಿಕ್ಷಣ ಪಡೆಯದೇ, ಯಾವ ಶಿಲ್ಪ ಶಾಸ್ತ್ರ ಅಧ್ಯಯನ ಮಾಡದೇ, ಸ್ವಯಂಭೂ ಶಿಲ್ಪಿ ಯಾದರು. ಇಂತಹ ಲಕ್ಷಾಂತರ ಶಿಲ್ಪಿಗಳಿದ್ದಾರೆ. ಎಲೆಮರೆಯ ಕಾಯಿಯಂತೆ ಎಂಬುದನ್ಯಾರೂ ಮರೆಯಬಾರದು. ಕಗ್ಗಲ್ಲಿನಲ್ಲೂ ಮೇಣದಂತೆ ಕೆತ್ತಿದ ಶಿಲ್ಪ ದ ವಿಗ್ರಹ ಗಳಲ್ಲೂ ಜೀವಂತಿಕೆತಂದು ಜೀವಕಳೆ ಯನಿತ್ತು ಮಾಡಿದ ಮೂರ್ತಿಗಳೆಷ್ಟೋ, ವಿಗ್ರಹ ಗಳೆಷ್ಟೋ, ಅರಮನೆಗಳೆಷ್ಟೋ ಗುಡಿಗೋಪುರಗಳೆಷ್ಟೋ, ಸಣ್ಣ ಗುಡಿಯ ವಿಗ್ರಹದಿಂದ ಹಂಪೆ, ವಾಸ್ತುಶಿಲ್ಪದ ಹೆಬ್ಬಾಗಿಲು ಐಹೊಳೆ, ಪಟ್ಟದಕಲ್ಲುಗುಹಾಂತರ ದೇವಾಲಯಗಳೂ,ಬೇಲೂರು ಹಳೇಬೀಡು, ಕೇದಾರ ಬದರೀ, ಕಂಚಿ ರಾಮೇಶ್ವರ, ಪದ್ಮನಾಭ ದೇವಾಲಯ, ತಿರುಪತಿ ವೆಂಕಟೇಶನವಿಗ್ರಹ, ಶೃಂಗೇರಿಶಾರದಾವಿಗ್ರಹ, ಮೖಸೂರಿನ ಚಾಮುಂಡೇಶ್ವರೀ ವಿಗ್ರಹ, ಕೊನಾರ್ಕ್ ಸೂರ್ಯದೇವಾಲಯ, ಅಜಂತ ಎಲ್ಲೋರ, ಅರಮನೆಗಳುಹೀಗೆ ಸಾವಿರಾರು ದೇವಾಲಯಗಳ ಕಲ್ಲಿನ ಪ್ರಕಾರ, ಯ್ಯಾವ ಯ್ಯಾವ ಕಲ್ಲಿನಲ್ಲಿ ಯ್ಯಾವ ಶಕ್ತಿಯಿದೆ, ಯಾವ ಜಾತಿಯ ಕಲ್ಲು, ಋತುಮಾನ ಚಿಂತನೆ, ಅಂಗಾಂಗ ಚಿಂತನೆ,ಭೂಮಿಯ ಚಿಂತನೆ, ಯಂತ್ರಗಳೇಯಿಲ್ಲದ ಕಾಲದಲ್ಲಿ ದೇವಾಲಯ ನಿರ್ಮಾಣಕಾರ್ಯದಲ್ಲಿ ಬಳಸಿರುವ ತಂತ್ರಗಾರಿಕೆ, ಕಲ್ಲಿಂದ ಕಲ್ಲನ್ನು ಯಾವುದೇ ಅಂಟುದ್ರವ ವಿಲ್ಲದೇಜೋಡಣೆ, ಯಾವುದೇ ಕ್ರೇನುಗಳಿಲ್ಲದೇ ಸಾವಿರಾರು ಲಕ್ಷಾಂತರ ವರ್ಷಗಳ ವರೆಗೆ ಶಾಶ್ವತತೆ ಪಡೆ
ಯುವಂತೆ ಮಾಡುವುದು ಯಾವುದೇ ಮಂತ್ರದಿಂದ ಸಾಧ್ಯವಿಲ್ಲ. ಇಂತಹ ಚಿಂತನೆ ಮನದಲ್ಲಿ ಮೂಡಿಸಿ ಕೊಂಡು ಗೋತ್ರ ಪ್ರವರ ಗಳಿಂದ ಕೂಡಿರುವ ಇವರು ವಿಶ್ವಕರ್ಮ ರು ಇಡೀ ದೇಶದ, ವಿಶ್ವದ ಸಂಸ್ಕೃತಿ ಯ, ವಾಸ್ತುಶಿಲ್ಪದ, ವೖಭವದ ಪ್ರತ್ಯಕ್ಷ ಸಾಕ್ಷಿಯ ಪ್ರತೀಕ.
ಭಾರತದೇಶ,ಕರ್ನಾಟಕ, ವಾಸ್ತುಶಿಲ್ಪಗಳ ತವರೂರು, ದೇಶದ ಸಂಸ್ಕೃತಿ ಯನ್ನು ಆಯಾದೇಶದ ವಾಸ್ತುಶಿಲ್ಪಕಲೆ ಯಿಂದ ಮಾತ್ರ ಅಳೆಯಬಹುದು. ದೇಶ ವಿದೇಶಿಯರನ್ನು ತನ್ನತ್ತ ಆಹ್ವಾನಿಸುತ್ತದೆ ಎಂಬುದೆಷ್ಟು ಆಶ್ಚರ್ಯವೋ ಅಷ್ಟೇ ಜಕಣಾಚಾರ್ಯ ರ ಜೀವನದ ಹಿನ್ನೆಲೆ. ಭಾರತೀಯ ಶಿಲ್ಪಿಯಾದ ಇವರು ಹಣ, ಕೀರ್ತಿ ಗಾಗಿ ಕಲಾಪ್ರತಿಭೆಯನ್ನು ಮಾರಲಿಲ್ಲ. ಪರೋಪಕಾರ್ಯಾರ್ಥ ಮಿದಂಶರೀರಂ, ಎಂಬಂತೆ ದೇವಾಲಯ ಉದ್ಘಾಟನಾ ಕಾರರ ಹೆಸರು ಕಲ್ಲಿನಲ್ಲಿ ಕೆತ್ತಲ್ಪಟ್ಟಿರುತ್ತದೆ ಆದರೆ ಆದೇವಾಲಯದ ದೇವತಾವಿಗ್ರಹ ಕೆತ್ತಿದವರ ಹೆಸರು ಎಲ್ಲೂ ಕೆತ್ತಲ್ಪಟ್ಟಿರುವುದಿಲ್ಲ, ಯಾವ ವಿಗ್ರಹವೂ ಉದ್ಭವ ಮೂರ್ತಿಯಾಗಲೂ ಸಾಧ್ಯವೇ ಯಿರುವುದಿಲ್ಲ, ಕಾಲ ಕ್ರಮೇಣ ಈ ವಿಗ್ರಹ ಉದ್ಭವ ಮೂರ್ತಿ ಎನ್ನುವವರಿದ್ದಾರೆ. ತಾನೆ ಸೃಷ್ಟಿಯಾಗಿದೆ ಎನ್ನುವವರೂ ಯಿದ್ದಾರೆ. ಶಿಲೆಯಲ್ಲಿ ದೇವರನ್ನು ಕಂಡವರು ಶಿಲ್ಪಿಗಳು. ಶಿಲ್ಪ ದಲ್ಲಿ ಬೃಹದಾಕಾರದ,ಭಾವನೆಯ ತಾದಾತ್ಮ್ಯ ಭಾವನೆ,ತಪಸ್ಸು ಮೇಳವಿಸಿದಾಗ ಜಗತ್ತೇ ಮೋಹಿಸುವಂತಹ, ಕೖಮುಗಿದು ನಮಸ್ಕರಿಸುವ,ತನ್ನ ಮನದ ನೋವನ್ನು ಹೇಳಿಕೊಳ್ಳುವ, ತನ್ನ ತಪ್ಪನ್ನು ಭಗವಂತನ ಪಾದಕ್ಕಿಟ್ಟು ಶರಣಾಗುವ, ಸುರಸುಂದರ ವಿಗ್ರಹ ನಿರ್ಮಾಣ ಸಾಧ್ಯ.ವಾಗಬೇಕಾದರೇ ಸಮಾಧಿಸ್ಥಿತಿ, ಸ್ಥಿತಪ್ರಜ್ನ,
ತೆ, ಏಕಾಗ್ರತೆ,ಸಾಧಕನ ಗುಣ ಯಿರಲೇಬೇಕು. ಆಗ ಮಾತ್ರ ಕಲಾನೖಪುಣ್ಯದಿಂದ ಕುಸುರೀಕೆಲಸ ಯಾವುದೇ ಲೋಹ,ಮರ, ಕಂಚು, ಬೆಳ್ಳಿ, ಬಂಗಾರ, ಮತ್ತು ಶಿಲೆಯಿಂದ ಸಾಧ್ಯ.ತನ್ನ ಜ್ಞಾನ ಶಕ್ತಿಯನ್ನು ವಿಗ್ರಹ ಗಳಲ್ಲಿ ಕೆತ್ತಿ ಜೀವತುಂಬಿ ದಿವ್ಯ ಅಗೋಚರ ಶಕ್ತಿ ಧಾರೆಯೆರೆಯೆರೆಯುತ್ತಾನೆ. ನೋಡುಗರು ಮೂಕವಿಸ್ಮಿತರಾಗುತ್ತಾರೆ. ಇಂತಹ ವ್ಯಕ್ತಿ ಯ ಶಕ್ತಿಯನ್ನು, ಪ್ರತಿಭಾಪಾಂಡಿತ್ಯವನ್ನು ತಿರುಚಿ ಈತ ಕಾಲ್ಪನಿಕ ವ್ಯಕ್ತಿ ಎನ್ನುವವರು ಕುಹಕಿಗಳು. ಹೋಯ್ಸಳ ಸಾಮ್ರಜ್ಯದ ದೊರೆ ವಿಷ್ಣುವರ್ಧನ, ನಾಟ್ಯರಾಣಿ ಶಾಂತಲಾದೇವಿ, ಗುರು ರಾಮಾನುಜಾ ಚಾರ್ಯ ಕಾಲ್ಪನಿಕ ವ್ಯಕ್ತಿಗಳಲ್ಲ ವೆಂದಮೇ ಲೆ ಇವರ ವಾಸ್ತುಶಿಲ್ಪದ ಆಶೋತ್ತರಗಳನ್ನು ಬೇಲೂರು, ಹಳೇಬೀಡು, ಸೋಮನಾಥ ಪುರದಲ್ಲಿಶಿಲ್ಪಕಲೆಯಲ್ಲಿ ನಿರ್ಮಿಸಿದ ಶಿಲ್ಪಿ ಜಕಣಾಚಾರ್ಯಕಾಲ್ಪನಿಕವ್ಯಕ್ತ ಹೇಗಾಗಲು ಸಾಧ್ಯ. ಮಂತ್ರದಿಂದ ಮಾವಿನಕಾಯಿ ಉದುರಿಸಲು ಸಾಧ್ಯವಿಲ್ಲ. ತನ್ನ ಜೀವಮಾನದಲ್ಲಿ 660ಕ್ಕೂ ಹೆಚ್ಚಿಗೆ ಶಾಶ್ವತ ವಿಗ್ರಹಾದಿದೇವಾಲಯಗಳನ್ನು ಸೂರ್ಯಚಂದ್ರರಿರುವ ವರೆಗೂ ಉಳಿಯುವ ದೇವಾಲಯ ಗಳ ಶಿಲ್ಪಿ ಸ್ಥಪತಿ ಅಮರ ಶಿಲ್ಪಿ ಜಕಣಾಚಾರ್ಯ ರದು. ದೖವ ಶಿಲ್ಪ ರಹಿತಬ್ರಾಹ್ಮಣ್ಯ ಪೂರ್ಣ ಬ್ರಾಹ್ಮಣ್ಯ ವಾಗಲಾರದು, ದೇವತಾ ಮೂರ್ತಿಗಳೇಯಿಲ್ಲದ ಮೇಲೆ ಹೇಗೆ ಮಂತ್ರ ಸೃಷ್ಟಿಸಲುಸಾಧ್ಯ, ಬರೀ ಮಂತ್ರಕ್ಕೆ ಬೆಲೆಯಿದೆಯೇ? ಎಂದು ಶಿಲ್ಪ ಶಾಸ್ತ್ರ ಹೇಳುತ್ತದೆ.
ಸಮಾಜದ ಮೇರುಪುರುಷ ಮುಂದೆ ಗುರು ರಾಮಾನುಜಾ ಚಾರ್ಯರ ವಿಶಿಷ್ಟಾದ್ವೖತ ಸಿದ್ಧಾಂತವನ್ನು ವಿರೋಧಿಸಿದ ಚೋಳದೊರೆ ಯಿಂದ ಬಿಡುಗಡೆಗೊಳಿಸಿ ಶಿವದೇವಾಲಯಗಳನ್ನು ಕಟ್ಟಿ, ಹೋಯ್ಸಳದೊರೆ ವಿಷ್ಣುವರ್ಧನ, ನಾಟ್ಯ ರಾಣಿ ಶಾಂತಲೆ ಯ ಅನುಮತಿ ಯಂತೆ ಬೇಲೂರಿನಲ್ಲಿ ಚೆನ್ನಕೇಶವ ದೇವಾಲಯ, ಹಾಗು ಹಳೇಬೀಡಿನಲ್ಲಿ ಹೊಯ್ಸಳೇಶ್ವರ, ಶಾಂತಲೇಶ್ವರ ದೇವಾಲಯ ಕಟ್ಟಿಕೊಟ್ಟವರೇ ಜಕಣಾಚಾರ್ಯರು. ಜಕಣಾಚಾರ್ಯರು ಗುರುದರ್ಶನಕ್ಕಾಗಿ ಕೖದಾಳ ಕ್ಕೆ ಬಂದಾಗ, ತನ್ನ ಪತ್ನಿ ಸೌಪರ್ಣಾ ದೇವಿಗೆ ಹುಟ್ಟಿದ ಮಗು ತನ್ನದಲ್ಲ ವೆಂಬ ಕುಹಕಿಗಳಅಪನಂಬಿಕೆಯ ಮಾತಿನಿಂದ ದೇಶಾಂತರ ಹೊರಟು ಹೋಗಿ ತನ್ನ ಹೆಸರು ವಿಶ್ವರೂಪಚಾರ್ಯನೆಂದು ಬದಲಾಯಿಸಿ ಕೊಂಡು ಗುರ್ತು ಹಿಡಿಯಲಾರದಷ್ಟು ದೖಹಿಕವಾಗಿ, ಮಾನಸಿಕವಾಗಿ ಜರ್ಜರಿತನಾದಾಗ ಗುರು ರಾಮಾನುಜಾ ಚಾರ್ಯರ ಮಾತುಗಳಿಂದ ಪರಿವರ್ತನೆಗೊಂಡು ದೇವೂಜ ಸ್ಥಪತಿಯೊಂದಿಗೆ ನೂರಾರು ಶಿಲ್ಪಿ ಗಳ ಸಹಾಯದಿಂದ ಅತ್ಯಮೋಘವಾದ ಶ್ರೀ ಚೆನ್ನಕೇಶವ ದೇವಾಲಯ ನಿರ್ಮಿಸಿದನು. ತನ್ನ ಪತಿಗೆ ಗೊತ್ತಾಗದಂತೆ ಸೌಪರ್ಣಾದೇವಿ ಪತಿಯಿದ್ದೆಡೆ ಪರಿಚಾರಿಕೆಯಾಗಿ ಕೆಲಸ ಮಾಡುತ್ತಿರುತ್ತಾಳೆ. ಚನ್ನಕೇಶವನ ವಿಗ್ರಹ ಪ್ರತಿಷ್ಠಾಪನಾದಿನ ಓರ್ವ ಚಿರ ಯುವಕ ಅಲ್ಲಿಗೆಬಂದು, ಈ ವಿಗ್ರಹ ಪ್ರತಿಷ್ಠಾಪನೆಗೆ ಪೂಜೆಗೆಯೋಗ್ಯವಿಲ್ಲ, ಇದರ ಹೊಕ್ಕುಳಲ್ಲಿ ನೀರು,ಮರಳೂ,ಸಣ್ಣ ಕಪ್ಪೆ, ಇರುವುದೆಂದು ಸೂಚಿಸಿದವನ ಮಾತುಕೇಳಿ ಆಶ್ಚರ್ಯಗೊಂಡ ದೊರೆ ವಿಷ್ಣುವರ್ಧನ, ರಾಣಿ ಶಾಂತಲೇ ಅನುಮಾನಗೊಂಡು ಪರೀಕ್ಷಿಸಲು ಮುಂದಾಗುತ್ತಾರೆ.ಕೋಪ, ಅವಮಾನ ಗೊಂಡ ಜಕಣಾಚಾರ್ಯ ಇದುಸತ್ಯವಾದರೇ ತನ್ನ ಬಲಗೖ ಕತ್ತರಿಸಿಕೊಳ್ಳುವುದಾಗಿಯೂ, ಯುವಕ ಇದುಸುಳ್ಳಾದರೆ ತಲೆಕತ್ತರಿಸಿಕೊಳ್ಳುವುದಾಗಿಯೂ ಪ್ರತಿಜ್ಞೇ ಮಾಡುತ್ತಾರೆ. ಆಗ ಯುವಕ ಈ ಪ್ರತಿಮೆಗೆಲ್ಲಾ ಶ್ರೀಗಂಧ ಲೇಪಿಸಿದಾಗ, ಇಡೀವಿಗ್ರಹ ಒಣಗಿದರೂ,ಹೊಕ್ಕುಳದ ಭಾಗದಶ್ರೀಗಂಧ ಒದ್ದೆಯಾಗೆ ಉಳಿಯಿತು. ಹೊಕ್ಕುಳದ ಭಾಗವನ್ನು ಸೂಕ್ಷ್ಮವಾಗಿ ಒಡೆದುನೋಡಲಾಗೀ ಯುವಕಹೇಳೀದಂತೇ ನೀರು, ಮರಳು,ಕಪ್ಪೆ,ಇದ್ದುದು ನಿಜವಾಯ್ತು. ಇಂತಹ ತಪ್ಪು ತನ್ನಿಂದಾಯಿತೆಂದು, ಇನ್ನೆಂದೂ ಇಂತಹ ತಪ್ಪು ಆಗಬಾರದೆಂದು,ಆಕೂಡಲೇ ಜಕಣಾಚಾರ್ಯ ತನ್ನ ಬಲಗೖ ಕತ್ತರಿಸಿಕೊಂಡರು. ಎಲ್ಲರಿಗೂ ಆದರ್ಶ ನಾದ ಆ ಯುವಕನೇ ತನ್ನ ಮಗ ಡಂಕಣಾಚಾರ್ಯನೆಂದೂ, ಪರಿಚಾರಿಕೆಯೇ ತನ್ನ ಪತ್ನಿಯೆಂದೂ ತಿಳಿದು ಸಂತೋಷಗೊಂಡ. ಆದರ್ಶನಾದ ತಂದೆಯನ್ನೇ ಮೀರಿಸಿದ ವನೇ ತನ್ನ ಮಗನೆಂದು ತಿಳಿದಾಗ ಪರಮಾನಂದ ವಾಗುತ್ತದೆ. ಅಲ್ಲದೇ ಆ ಯುವಕ ತನ್ನ ತಂದೆ ತಾಯಿಯನ್ನು ಹುಡುಕುತ್ತಾ ಬಂದಿರುವುದಾಗಿ ತಿಳಿಸಿದನು. ವಿಶ್ವ ರೂಪಚಾರ್ಯರೇ ತನ್ನ ತಂದೆಜಕಣಾಚಾರ್ಯರೆಂದೂ, ಪರಿಚಾರಿಕೆಯ ವೇಶದಲ್ಲಿದ್ದವರೇ ತನ್ನತಾಯಿ ಸೌಪರ್ಣ ದೇವಿಯೆಂದು ಸತ್ಯ ಬಯಲಾಗುತ್ತದೆ. ಮಗನ ವ್ಯಕ್ತಿತ್ವ ದ ಮುಂದೆ ತಾನುಚಿಕ್ಕವನಾದೆನೆಂದು , ಜ್ನಾನಕ್ಕೆ ಮೀರಿದ್ದು ಯಾವುದೂಯಿಲ್ಲ ವೆಂಬ ಸತ್ಯ ಅರಿಯುತ್ತಾರೆ. ಮತ್ತೊಂದು ಚನ್ನಕೇಶವನ ವಿಗ್ರಹ ಕೆತ್ತಿ ಸ್ಥಾಪಿಸುತ್ತಾರೆ. ಇಂದಿಗೂ ಬೇಲೂರಿನಲ್ಲಿಕಪ್ಪೆಚನ್ನಿಗರಾಯ(ಕಪ್ಪೆಇದ್ದುದರಿಂದ)ನ ವಿಗ್ರಹ ನೋಡಬಹುದು. ಇಂತಹ ಎಷ್ಟೋ ವಿಗ್ರಹಗಳು ಕುಹಕಿಗಳ ದಾಳಿಕೋರರಿಂದ ಊನವಾಗಿವೆ ಎಂಬುದು ಎಲ್ಲರಿಗೂತಿಳಿದ ವಿಷಯ. ಧೀಮಂತ ಕಲಾಶಿಲ್ಪಿಗಳ ಇತಿಹಾಸವೇ ಬುಡ ಮೇಲಾಗಿವೆ. ಎಷ್ಟೋ ಮರೆಯಾಗಿವೆ, ಮತ್ತೆಷ್ಟೋ ತಿರುಚುತ್ತಾಸಾಗಿವೆ.ಹೀಗಾಗದಂತೆ ಕಾಪಾಡುವ ಕರ್ತವ್ಯ ಎಲ್ಲರದಾಗಬೇಕು.
ಹೀಗೆಜಕಣಾಚಾರ್ಯರು ಸೋಮನಾಥಪುರದಲ್ಲಿ16ವರ್ಷ 6ತಿಂಗಳು, ಬೇಲೂರಿನಲ್ಲಿ 26ವರ್ಷ 6ತಿಂಗಳು, ಹಳೇಬೀಡಿನಲ್ಲಿ 18 ವರ್ಷ 6ತಿಂಗಳು ನೆಲೆಸಿ ತ್ರಿಕೂಟಾಚಲವನ್ನು ನಿರ್ಮಿಸಿದವರೇ ಅಮರಶಿಲ್ಪಿಜಕಣಾಚಾರ್ಯರೆಂದು ಕೋಟಿಕೋಟಿಸಲ ಹೇಳಿದರೂ ತಪ್ಪಾಗದು. ಬೇಲೂರಿನಲ್ಲಿ ಸರ್ವಾಲಂಕೃತವಾದ ನಂದಿ ವಿಗ್ರಹ, 242 ರೀತಿಯ ಕೇಶ ವಿನ್ಯಾಸ ಹೊಂದಿದ ಶಿಲಾ ಬಾಲಿಕೆಯರು, 108ಕಂಭಗಳೂ, ವಿಭಿನ್ನ ಶೖಲಿಯ ನಯನ ಮನೋಹರ ವಾದ "ಬೇಲೂರನ್ನು *ಹೊರಗಿನಿಂದ ನೋಡು, ಹಳೇಬೀಡನ್ನುಒಳಗಿನಿಂದ
ನೋಡು"ಎಂಬ ನಾಣ್ಣುಡಿ ಅರ್ಥಗರ್ಭಿತ ವಾದ್ದು. ಈದೇವಾಲಯದಲ್ಲಿ ಕಡಿಮೆ ಎಂದರೂ 20000ದೇವರ, ಶಿಲಾಬಾಲಿಕೆಯರ, ಪ್ರಾಣಿ ಪಶು ಪಕ್ಷಿಗಳ, ರಾಮಾಯಣ, ಮಹಾಭಾರತ ಕಥೆಸಾರುವವಿಗ್ರಹಗಳಿವೆ. ಅನೇಕ ವಿಶ್ವ ವಿದ್ಯಾನಿಲಯಗಳಲ್ಲಿ ವೖಶ್ವಕರ್ಮಣ ಪರಂಪರೆಯ ಮಹತ್ವ ವನ್ನು ಸಾರ ಬೇಕಾಗಿದೆ. ಮೖಸೂರಿನ ಚಾಮುಂಡೇಶ್ವರಿ ವಿಗ್ರಹ ಕೆತ್ತಿದವರು ಮೖಸೂರಿನ ಶಿಲ್ಪಿ ನಾಗಲಿಂಗ ಸ್ವಾಮಿ ಗಳೆಂಬುದು ಕೆಲವರಿಗೆಮಾತ್ರ ಗೊತ್ತಿದೆ. ಕೇವಲ ನೂರಾರು ವರ್ಷ ದ ಇತಿಹಾಸವೇ ತಿಳಿಯದವರು 900 ವರ್ಷ ದ ಇತಿಹಾಸ ವನ್ನು ಉಲ್ಟ ಪಲ್ಟ ಮಾಡದಿರುವರೇನೀವೇ ಹೇಳಿ ದೇಶ ವಿದೇಶಿಯರನ್ನು ಸದಾಕಾಲ ಆಕರ್ಷಿಸುವ ಲೋಹಶಿಲ್ಪ, ಮರ ದ ಶಿಲ್ಪ, ಕಂಚಿನ ಶಿಲ್ಪ, ಶಿಲಾ ಶಿಲ್ಪ, ಬೆಳ್ಳಿ ಚಿನ್ನದ ಕಸುಬೇ ನಮ್ಮ ಆತ್ಮ, ಉಸಿರು, ನರ ನಾಡಿಯಲ್ಲಿ ಹರಿದಿವೆ. ಜಕಣಾಚಾರ್ಯರು ವೖಶ್ವಕರ್ಮಣರ ಹೃದಯದಲ್ಲಿ ನೆಲೆಸಿ ಶ್ರೇಷ್ಠ ರೆನಿಸಿದ್ದಾರೆ.
ರಾಜ ವಿಷ್ಣುವರ್ಧನ, ಜಕಣಾಚಾರ್ಯರಿಗೆ ಗೌರವ ಸಮರ್ಪಣೆಮಾಡಲು ಆನೆಯ ಮೇಲೆ ಶಿಲೆಯೊಂದನ್ನು ಕಳುಹಿಸುತ್ತಾನೆ. ಆ ವೇಳೆಗೆ ವಯಸ್ಸಾದ
ಜಕಣಾಚಾರ್ಯರು ಕ್ರೀಡಾ ಪುರ, ನಂತರದಲ್ಲಿ ಕೖದಳ, ಆನಂತರದಲ್ಲಿ ಕೖದಾಳ ವಾಯ್ತು. ತ್ರಿಮೂರ್ತಿ ಸ್ವ ರೂಪರಾದ ಬ್ರಹ್ಮ, ವಿಷ್ಣು, ಶಿವ ರನ್ನು ಏಕಶಿಲೆಯಲ್ಲಿ ಕೆತ್ತಿದ್ದರಿಂದ ಕಲೆಗೆಮೆಚ್ಚಿದ ತ್ರಿಮೂರ್ತಿಯರು ಹೋದ ಕೖ ಭರಿಸುತ್ತಾರೆ ಅದೇ ಮುಂದೆ ಕೖದಳ= ಕೖ, ದಳ =ನೀಡಿದ್ದರಿಂದ ಕೖದಾಳ ವಾಯ್ತು. ಇಂತಹ ಅಪ್ರತಿಮಶಿಲ್ಪಿಯನ್ನು ಸ್ಮರಿಸಿದರೇ ಲಕ್ಷ ಲಕ್ಷ ಶಿಲ್ಪಿ ಗಳಿಗೆ ಗೌರವಿಸಿದಂತೆ. ಕೖದಳದಲ್ಲಿನಿರ್ಮಿಸಿರುವ ತ್ರಿಮೂರ್ತಿ ವಿಗ್ರಹ ದಾಳಿಕೋರರಿಂದ ಭಿನ್ನವಾದ ವಿಗ್ರಹವನ್ನುಸರಿಪಡಿಸಿದವರು 21ನೇಶತಮಾನದ ಶಿಲ್ಪಿ ಚಿಕ್ಕಮಗಳೂರಿನ ಶಿಲ್ಪಿ ಜಯಣ್ಣಾಚಾರ್ಯರು ಎಂದುಹೇಳಲು ಹೆಮ್ಮೆಯೆನಿಸಿದೆ.
ಲೇಖನ:
ಡಾ. ಎಸ್. ಬಿ. ಭಾಗ್ಯಲಕ್ಷ್ಮಿ ಕೆ.ಆಚಾರ್ಯ.
*ಪ್ರಾಂಶುಪಾಲರು, ಲೇಖಕಿ, ನಿರೂಪಕಿ, ಸಂಪನ್ಮೂಲವ್ಯಕ್ತಿ


