ಶಿವಪುರ ಕೆರೆಗೆ ಏರಿ ಊಟವಣಿ ಕೋಡಿ ರೇವಟ್ಮೆಂಟ್ ₹2 ಕೋಟಿ ಅನುಧಾನ

ಭಾಸ್ಕರ ಪತ್ರಿಕೆ
0
ತಿಪಟೂರು: ಪ್ರಸ್ತುತ ಈಗ ಶಿವಪುರ-ಕರಡಾಳು ಕೆರೆ ನೀರು ಪೂರ್ವ ಭಾಗದ ಕೋಡಿಯ ಮೂಲಕ ಹಳ್ಳದ ಮೇಲೆ ಹರಿದುಕೊಂಡು ನೀರು ಗದ್ದೆ ಬಾಯಲಿನ ಎಲ್ಲಾ ಪ್ರದೇಶ ಕ್ಕೂ ಸಮನಾಗಿ ಹರಿಯಲು ಅವಕಾಶ ಕಲ್ಪಿಸಿ ರೈತರ ಬಹು ದಿನದ ಅಸಮಾನತೆಯ ಆಕ್ರೋಶದ ಕೂಗಿಗೆ ನ್ಯಾಯ ಒದಗಿಸಿದ್ದು ಈ ಸಂಬಂಧ M I D ಸಣ್ಣ ನೀರಾವರಿ ಇಲಾಖೆ ವತಿಯಿಂದ ರೂ 2 (ಎರಡು) ಕೋಟಿ ಅನುಧಾನ ಬಿಡುಗಡೆ ಮಾಡಿಸಿದ ತಿಪಟೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಕೆ ಷಡಕ್ಷರಿ ಯವರಿಗೆ ಈ ಭಾಗದ ರೈತರು ಹಾಗೂ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ. 
ಹಿಂದೆ 100 ಕ್ಕೆ 95 ಭಾಗ ನೀರು  ಶಿವಪುರ- ಕರಡಾಳು  ಕೆರೆಯ ಪಸ್ತಿಮ ಭಾಗದ ಕೊಡಿಯಿಂದ ಹೊರಕ್ಕೆ ಹೋಗುತ್ತಿದ್ದು  ಇದು ಸೀದಾ  ಮಲ್ಲಘಟ್ಟ ಕೆರೆ ಗೆ ಹೋಗುತ್ತಿತ್ತು.
ಗಿಣಿಕಿಕೆರೆ ಗ್ರಾಮಸ್ಥರು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೊಟ್ಟಿಗೇಹಳ್ಳಿ ಗ್ರಾಮಕ್ಕೆ ಬಸ್ ಅನ್ನು 1 ಕಿ ಮೀ. ಪಕ್ಕದಲ್ಲಿ ಇರುವ ಗಿಣಿಕಿಕೆರೆ ಹೋಗಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ವಾಪಸ್ ಕೊಟ್ಟಿಗೇಹಳ್ಳಿ ಮೂಲಕ ಹೋಗಲು ಮಾನ್ಯ ಶಾಸಕರು ಅಸ್ತು, ಆಗಲಿ ಮನವಿ ಕೊಡಿ ಪರಿಶೀಲಿಸಿ, ಡಿಪೋ ದವರ ಜೊತೆ ಮಾತನಾಡಿ ಪರಿಗಣಿಸುವಂತೆ ಸುಚಿಸುತ್ತೇನೆ ಎಂದು ತಿಳಿಸಿರುತ್ತಾರೆ.
ಆದರೆ ಈಗ ಸದ್ರಿ ಕೆರೆಯ ಪೂರ್ವ ಭಾಗದ ಕೊಡಿಯಿಂದ ನೀರು ಶೇ 60 ಭಾಗ ನೀರು ಈ ಪೂರ್ವ ಭಾಗದ ಮೂಲ ಮುಡ್ಲು ಕೋಡಿ ಕೋಣನಗುಂಡಿ ಯ ಮೂಲಕ ಗದ್ದೆ ಬಾಯಲಿನ ರಾಯಾಗಲುವೇ ಮುಖಾಂತರ ಗದ್ದೆ ಬಯಲಿನ ಎಲ್ಲಾ ರೈತರ ಗದ್ದೆ ಗಳಿಗೂ ನೀರನ್ನು ಉಣ ಬಡಿಸಿಕೊಂಡು ಹೋಗುವುದರಿಂದ ಎಲ್ಲರಿಗೂ ಸಮಾನವಾಗಿ ನೀರು ಹಂಚಿಕೆಯಾಗುತ್ತದೆ. 
ಈ ಸಂದರ್ಭದಲ್ಲಿ  ಕುಪ್ಪಾಳು ನರೇಗಾ ಇಂಜಿನಿಯರ್ ಭರತ್ ಲಾಲ್, ನಗರಸಭಾ ನಾಮಿನಿ ಸದಸ್ಯ ಲೋಕನಾಥ್ ಸಿಂಗ್, ಕುಪ್ಪಾಳು ಗ್ರಾಮ ಪಂಚಾಯತ್ ನಿಂದ ಕಾರ್ಯದರ್ಶಿ ಬಸವಯ್ಯ ನವರು, ಮಹಾಲಿಂಗಪ್ಪನವರು, ಗ್ರಂಥಪಾಲಕರಾದ ಶಂಕರಪ್ಪ ನವರು, M l d ಇಲಾಖೆ ಯ A E E ದೊಡ್ಡಯ್ಯನವರು, ಶಿವಪುರದ ಕೃಷ್ಣಯ್ಯ, ಕಾಂತರಾಜು, ಶಾಂತರಾಜು s c,ಯಶವಂತ್ ಕುಮಾರ್, ಗಿಣಿಕಿಕೆರೆ b.ತಿಮ್ಮಯ್ಯ, ಕೆಂಪಣ್ಣ,
ಜಯಣ್ಣ, ಪಾoಡಣ್ಣ, ಬಳ್ಳೆಕಟ್ಟೆ ಮಹೇಶ್ ರವರು, ಕರಡಾಳು ಚಂದ್ರು, ಜಯಣ್ಣವವರು, ಉಪ್ಪಿನಹಳ್ಳಿ ಮಹದೇವಣ್ಣ 
ಮತ್ತು ಬಸವರಾಜು ಮತ್ತಿತರರು ಉಪಸ್ಥಿತರಿದ್ದರು. 

ವರದಿ: ಧರಣೇಶ್ ಕುಪ್ಪಾಳು 

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*