ತಿಪಟೂರು. ಲೋಕಸಭಾ ಸಂಸತ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ತಿಪಟೂರು ತಾಲ್ಲೂಕಿನ ದಲಿತ ಮುಖಂಡರುಗಳು ಅಂಬೇಡ್ಕರ್ ವೃತ್ತದಿಂದ ಕಾಲ್ನಾಡಿಗೆ ಜಾತ ನಡೆಸಿ ಅಮಿತ್ ಶಾ ಪತಿಕೃತಿ ಧಹಿಸಿ ಮಿನಿವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿ ಉಪ ವಿಭಾಗ ಅಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು .
ನಂತರ ಮಾತನಾಡಿದ ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ. ಗೃಹ ಸಚಿವ ಅಮಿತ್ ಶಾ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಲೋಕಸಭಾ ಸಂಸತ್ ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಇಂಥವರು ಈ ದೇಶವನ್ನು ಹೇಗೆ ಕಾಯುತ್ತಾರೆ ಎಂದು ಈ ದೇಶದ ಜನ ಆತಂಕ ಗೀಡಾಗಿದ್ದಾರೆ ಈ ದೇಶದಲ್ಲಿ ದಲಿತರಿಗೆ ಪದೇ ಪದೇ ಅನ್ಯಾಯ ವಾಗುತ್ತಿದೆ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಲಾಗುತ್ತಿದೆ ಇಂಥವರನ್ನು ಈ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಛಲವಾದಿ ಅಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ. ಭ್ರಷ್ಟ ನೀಚ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಾಬಾ ಸಾಹೇಬ್ರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಇವರನ್ನು ಕೂಡಲೇ ಮಂತ್ರಿ ಸ್ಥಾನಯಿಂದ ವಜಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ ಮಾತನಾಡಿ ಈ ಭಾರತದ ದೇಶದ ಪಾರ್ಲಿಮೆಂಟ್ ನಲ್ಲಿ ನಿಂತು ಈ ರೀತಿ ಹೇಳಿಕೆ ಕೊಡುತ್ತಾನೆ ಎಂದರೆ ಎಷ್ಟರಮಟ್ಟಿಗೆ ಈತನ ಕೊಳಕು ಮನಸ್ಥಿತಿ ಇದೆ ಎಂದು ಕಾಣುತ್ತದೆ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಭಿಕ್ಷೆಯಲ್ಲಿ ಚುನಾಯಿತನಾಗಿ ಇಂದು ಕೇಂದ್ರ ಸರ್ಕಾರದ ಗೃಹ ಸಚಿವನಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನೆಯುವುದು ಈತನಿಗೆ ಫ್ಯಾಶನ್ ಆಗಿದೆ ಅದಕ್ಕಾಗಿ ಇಂತಹ ದುರಹಂಕಾರಿ ಹೇಳಿಕೆ ನೀಡಿರುವುದು ಖಂಡನೀಯ ಈ ಕೂಡಲೇ ನಮ್ಮ ಭಾರತೀಯರಿಗೆ ಕ್ಷಮೆ ಕೇಳಿ ನಿಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೋಗಿ ಇಲ್ಲವಾದರೆ ದೇಶಾದ್ಯಂತ ಹೋರಾಟ ಮಾಡಲಾಗುವುದು.
ಈ ಪ್ರತಿಭಟನೆಯಲ್ಲಿ ದಲಿತ ಮುಖಂಡ ಪೆದ್ದಿಹಳ್ಳಿ ನರಸಿಂಹಯ್ಯ. ಬಿಳಿಗೆರೆ ಚಂದ್ರಣ್ಣ. ಡಿಎಸ್ಎಸ್ ತಾ. ಅಧ್ಯಕ್ಷ ಟಿ ರಾಜು. ಪುಟ್ಟಸ್ವಾಮಿ ಚಿಗ್ಗಾವೆ. ದಯಾನಂದ್ ಬಸವರಾಜ ಗಾಂಧಿನಗರ. ಕುಮಾರ್. ಪರ್ವೇಜ್. ಸಾಬುದ್ದೀನ್. ಸಮೀರ್. ಸಿದ್ದೀಕ್. ಚಂದ್ರಶೇಖರ್. ಸೇರಿದಂತೆ ಮತ್ತೀತರು ಮುಖಂಡರುಗಳು ಭಾಗಿಯಾಗಿದ್ದರು.

