ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ವಿಶ್ವಕರ್ಮ ಸಮಾಜದಿಂದ ಪ್ರತಿಭಟನೆ

ಭಾಸ್ಕರ ಪತ್ರಿಕೆ
0


ರಾಯಚೂರು: ಡಿ.30. ಬೀದರ ಜಿಲ್ಲೆ ಬಾಲ್ಕಿ ತಾಲ್ಲೂಕಿನ ಗುತ್ತೇಗೆದಾರ ವಿಶ್ವಕರ್ಮ ಸಮಾಜದ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿರುವವರನ್ನು ಕೂಡಲೆ ಬಂಧಿಸಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ಇಂದು ರಾಯಚೂರು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘ ರಾಜ್ಯದ್ಯಕ್ಷರಾದ ಕನ್ನಡ ಸೋಮು ಮನವಿ ಪತ್ರವನ್ನು ಸಲ್ಲಿಸಿದರು.        ಕಲ್ಯಾಣ ಕರ್ನಾಟಕದಲ್ಲಿ ವಿಶ್ವಕರ್ಮ ಸಮಾಜದ ಸಚಿನ್ ಪಾಂಚಳ ಸಾವಿಗೆ ಕಾರಣರಾದ ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತರು ಉಳಿದವರ ವಿರುದ್ಧ ಈಗಾಗಲೇ ಎಪ್ ಐ ಆರ್ ಆಗಿದ್ದು ಪೊಲೀಸರು ತಕ್ಷಣ ಅವರನ್ನೆಲ್ಲ ಬಂದಿಸಬೇಕು ಅವರಿಗೆ ಕಠಿಣ ಶಿಕ್ಷೆ ಆಗಬೇಕು. ರಾಜ್ಯದ ಮುಖ್ಯಮಂತ್ರಿಗಳು ಸಚಿನ್ ಪಾಂಚಾಳ್ ಕುಟುಂಬಕ್ಕೆ ಭೇಟಿ ನೀಡಿ ಅವರಿಗೆ 50 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ರಾಜ್ಯ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ಮಾರುತಿ ಬಡಿಗೇರ್, ಜಿಲ್ಲಾಧ್ಯಕ್ಷರಾದ ಪ್ರಕಾಶ್ ಗುಂಜಳ್ಳಿ ಬಡಿಗೇರ್, ಮಾಜಿ ನಾಮ ನಿರ್ದೇಶಕರಾದ ಎಸ್ ರವೀಂದ್ರ ಕುಮಾರ್, ಶ್ರೀ ಗಂಗಾಧರ ಸ್ವಾಮೀಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌನೇಶ ಬಡಿಗೇರ, ಕಾರ್ಪೆಂಟರ್ ಸಂಘದ ಅಧ್ಯಕ್ಷ ಬ್ರಹ್ಮಯ್ಯ ಬಡಿಗೇರ್, ವೆಂಕಟೇಶ್ ಕೊಂಡಾಪುರ, ಮೌನೇಶ್ ವಡವಟಿ, ರವಿ ಬೀಜನಗೆರೆ, ಶ್ರೀಕಾಂತ, ನರೇಶ್, ಸಿದ್ದು, ರಂಗಸ್ವಾಮಿ, ಮಹೇಶ್, ಭೀಮೆಷ್ ಬಡಿಗೇರ್ ಕೆರೆಬೂದೂರು ಇನ್ನಿತರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*