ರಾಯಚೂರು: ಡಿ. 29. ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ರಾಯಚೂರು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಜನಸೇವಾ ಸಂಘದ ನೂತನವಾಗಿ ರಾಯಚೂರು ಜಿಲ್ಲಾಧ್ಯಕ್ಷರಾಗಿ ಪ್ರಕಾಶ್ ಬಡಿಗೇರ್ ಗುಂಜಳ್ಳಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೌನೇಶ್ ಬಡಿಗೇರ್ ರಾಯಚೂರು ಇವರು ನೇಮಕವಾಗಿದ್ದಾರೆ ಎಂದು ರಾಜ್ಯ ಅಧ್ಯಕ್ಷರಾದ ಕನ್ನಡ ಸೋಮು ಪತ್ರಿಕೆಗೆ ತಿಳಿಸಿದ್ದಾರೆ. ಅವರು ನಿನ್ನೆ ಸಂಜೆ ರಾಯಚೂರು, ಖಾಸಗಿ ಹೋಟೆಲಲ್ಲಿ ಸಭೆ ಕರೆದು ಈ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಪ್ರಕಾಶ್ ಬಡಿಗೇರ್ ಗುಂಜಳ್ಳಿ ಅವರು ಕಳೆದ 25 ವರ್ಷಗಳಿಂದ ವಿಶ್ವಕರ್ಮ ಸಮಾಜಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದು ಅವರು ಇನ್ನೂ ಎತ್ತರಕ್ಕೆ ಬೆಳೆಯಬೇಕೆಂದು ಅವರಿಗೊಂದು ಜವಾಬ್ದಾರಿ ಸ್ಥಾನ ನೀಡಬೇಕೆಂದು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮೌನೇಶ್ ಆಚಾರ್ ಖಾನಾವಳಿ ಆಯ್ಕೆ ಮಾಡಲಾಗಿದೆ ನೂತನ ಅಧ್ಯಕ್ಷರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗೆ ಅಭಿನಂದಿಸಿದ ರಾಯಚೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ್ ರಾಮಸ್ವಾಮಿ ಮತ್ತು ಹೂಗಾರ ಸಮಾಜದ ರಾಜ್ಯಾಧ್ಯಕ್ಷರಾದ ಬಸವರಾಜ್ ಹೂಗಾರ್ ಹಾಗೂ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರು ಚಿಂತಕರಾಗಿರುವ ಮಾರುತಿ ಬಡಿಗೇರ್ ಅಭಿನಂದಿಸಿದರು.. ಈ ಸಂದರ್ಭದಲ್ಲಿ ಷಣ್ಮುಖ ಉಡುಂಗಲ್. ವೀರೇಶ್ ಕಮಲಾಪುರ್. ಕಿರಣ್ ಮೌನೇಶ್ ವಡವಾಟಿ. ಮಹೇಶ್ ಇನ್ನಿತರರಿದ್ದರು.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default

