ದಲಿತ ಮುಖಂಡರುಗಳಿಂದ ಗಣರಾಜ್ಯೋತ್ಸವ ಆಚರಣೆ

ಭಾಸ್ಕರ ಪತ್ರಿಕೆ
0

ತಿಪಟೂರು: ನಗರದ ಪ್ರವಾಸಿ ಮಂದಿರದಲ್ಲಿ ಸಾಂಕೇತಿಕವಾಗಿ ಇಂದು ದಲಿತ ಮುಖಂಡರುಗಳು ಮಹಾತ್ಮ ಗಾಂಧೀಜಿ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಗಣರಾಜ್ಯೋತ್ಸವವನ್ನು ಆಚರಿಸಿದರು. ನಂತರ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ. ದೇಶದ ಸಂವಿಧಾನ ಮತ್ತು ಕಾನೂನಿಗೆ ಪ್ರತಿಯೊಬ್ಬರು ಗೌರವ ಕೊಡುವ ಮುಖಾಂತರ ದೇಶದ ಗನತೆಯನ್ನು ಹೆಚ್ಚಿಸಬೇಕು ಹಾಗೂ ಗಣರಾಜ್ಯೋತ್ಸವ ಆಚರಣೆ ದೇಶದ ಐಕ್ಯತೆಯನ್ನು ಸಾರಬೇಕು ಈ ದೇಶದ ಸಂವಿಧಾನ ಜಾಗತಿಕ ಮಟ್ಟದಲ್ಲಿ ಗೌರವ ಪಡೆದುಕೊಂಡ ಹೆಗ್ಗಳಿಕೆ ಹೊಂದಿದ್ದು ಭವ್ಯ ಭಾರತ ನಿರ್ಮಿಸಲು ಕಟ್ಟಿ ಬದ್ಧರಾಗಬೇಕು ಎಂದರು.

ಈ ಸಂದರ್ಭದಲ್ಲಿ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೊಪ್ಪ ಶಾಂತಪ್ಪ. ವಕೀಲರಾದ. ಡಾ ವೆಂಕಟೇಶ್.ಅಶೋಕ್ ಗೌಡನಕಟ್ಟೆ. ಸುರೇಶ್ ರಾಜಶೇಖರ್ ಮೈಲಾರಪ್ಪ. ಗಂಗಾಧರ್. ಪ್ರಕಾಶ್ ಬಳ್ಳೇಕೆರೆ. ಸೇರಿದಂತೆ ಪ್ರಮುಖ ದಲಿತ ಮುಖಂಡರುಗಳು ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*