ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಗುರುಗದಹಳ್ಳಿ ಗ್ರಾಮದ ನಂಜಪ್ಪ ಸನ್ ಆಫ್ ಹೊನ್ನಪ್ಪ ಇವರಿಗೆ ಸೇರಿದ ಟಗರುಗಳನ್ನು ತೋಟದ ಮನೆಯ ಶೆಡ್ನಲ್ಲಿ ಕುಡಿಹಾಕಿದ್ದು ರಾತ್ರಿ ಸಮಯದಲ್ಲಿ ಏಕಾಏಕಿ ಶೆಡ್ಡಿಗೆ ನುಗ್ಗಿದ ಚಿರತೆಯೆಂದು ದಾಳಿ ಮಾಡಿ ಎರಡು ಟಗರುಗಳ ರಕ್ತ ಹೀರಿ ಬಲಿ ಪಡೆದಿದೆ.
ರೈತನಿಗೆ ಸುಮಾರು 50,000 ನಷ್ಟ ಸಂಭವಿಸಿದೆ ಎಂದು ರೈತ ಪತ್ರಿಕಾ ಮಾಧ್ಯಮಕ್ಕೆ ಹಳಲನ್ನು ತೋಡಿಕೊಂಡಿದ್ದಾರೆ. ಇತ್ತೀಚಿಗೆ ಗುರುಗದಹಳ್ಳಿ ಗ್ರಾಮದ ಸುತ್ತಮುತ್ತ ಹಳ್ಳಿಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಚಿರತೆಯನ್ನು ಸೆರೆ ಹಿಡಿದು ಸಾರ್ವಜನಿಕರು ಮತ್ತು ರೈತರಿಗೆ ಆತಂಕ ತಪ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ: ಮಂಜು ಗುರುಗದಹಳ್ಳಿ

