ಚಿಕ್ಕಮಗಳೂರು: ಸಿ.ಟಿ.ರವಿಗೆ ಹಿಂಸೆ ನೀಡುತ್ತಿರುವವರಿಗೆ ಸೂಕ್ತ ಬುದ್ಧಿ ನೀಡಲೆಂದು ಬಿಜೆಪಿ ಕಾರ್ಯಕರ್ತರು ಸ್ವಾಮಿ ಕೊರಗಜ್ಜನ ಮೊರೆ ಹೋಗಿದ್ದಾರೆ.
ಸಿ ಟಿ ರವಿ ಪರವಾಗಿ ಸ್ವಾಮಿ ಕೊರಗಜ್ಜನಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಬೆದರಿಕೆ ಪತ್ರ ಬರೆದವರಿಗೆ, ವೃತ್ತ ಆರೋಪ, ವೈಯಕ್ತಿಕ ಟಾರ್ಗೆಟ್ ಮಾಡಿದವರು ವಿರುದ್ದ ಪೂಜೆ ನಡೆಸಲಾಯಿತು.
ಸಿ.ಟಿ ರವಿಗೆ ಹಿಂಸೆ ನೀಡುವರಿಗೆ ಸೂಕ್ತ ಬುದ್ದಿ ನೀಡಲೆಂದು ಪೂಜೆ ಸಲ್ಲಿಸಲಾಗಿದೆ. ಸ್ವಾಮಿ ಕೊರಗಜ್ಜನ ದೇವಸ್ಥಾನದಲ್ಲಿ ಸಿ.ಟಿ.ರವಿ ಪರವಾಗಿ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ.
ಸಿ ಟಿ ರವಿ ವಿರುದ್ದ ಪಿತೂರಿ ಮಾಡುವರಿಗೆ ಒಳ್ಳೆಯ ಬುದ್ದಿ ನೀಡಲೆಂದು ಪೂಜೆ ಸಲ್ಲಿಸಲಾಗಿದೆ. ಬಿಳುಗುಳದಲ್ಲಿರುವ ಸ್ವಾಮಿ ಕೊರಗಜ್ಜನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಗಿದೆ. ಮೂಡಿಗೆರೆ ತಾಲೂಕಿನ ಬಿಳುಗುಳದ ಕೊರಗಜ್ಜನ ದೇವಸ್ಥಾನದಲ್ಲಿ ಈ ವಿಶೇಷ ಪೂಜೆ ಸಲ್ಲಿಸಲಾಗಿದೆ.

