ಮಹಾ ಕುಂಭಮೇಳದಲ್ಲಿ ವಿ.ಸೋಮಣ್ಣ ಭಾಗಿ

ಭಾಸ್ಕರ ಪತ್ರಿಕೆ
0

 


ಉತ್ತರ ಪ್ರದೇಶದ ಪ್ರಯಾಗ್ ರಾಜ್​​ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಹತ್ತು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದೆ. ಸಾಧು-ಸಂತರು ನಾಗಸಾಧುಗಳು, ವಿದೇಶಿ ಭಕ್ತರು ಸೇರಿದಂತೆ ಪ್ರತಿ ದಿನ ಅಂದಾಜು ಒಂದು ಕೋಟಿ ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ.

ಕರ್ನಾಟಕದಿಂದಲೂ ಸಾವಿರಾರು ಭಕ್ತರು ಮಹಾ ಕುಂಭಮೇಳಕ್ಕೆ ಭೇಟಿ ನೀಡುತ್ತಿದ್ದು, ಇದೀಗ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದಾರೆ. ಪತ್ನಿ ಶೈಲಜಾ ಸೋಮಣ್ಣ ಅವರೊಂದಿಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ಗೆ ತೆರಳಿರುವ ಸಚಿವ ವಿ.ಸೋಮಣ್ಣ ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ತಿಪಟೂರಿನ ಪರ್ತಕರ್ತ ಸಂಘದ ಆಧ್ಯಕ್ಷರಾದ ಕರಿಕೆರೆ ಪ್ರಶಾಂತ್‌, ಪರ್ತಕರ್ತರು ಹಾಗೂ ರಾಷ್ರ್ಟೀಯ ಸ್ವಯಂ ಸೇವಾ ಸಂಘದ ಸದಸ್ಯರಾದ ರಂಗಾಪುರ ಮನೋಹರ್ ಹಾಗೂ, ಈಚನೂರು ಜಗದೀಶ್, ಆನಂದ್‌ ಕುಂಭಸ್ನಾನದಲ್ಲಿ ಭಾಗಿಯಾಗಿದ್ದರು.

ಇವರಿಗೆ ಭಾಸ್ಕರ ಪತ್ರಿಕಾ ಬಳಗವು ಅಭಿನಂದನೆ ಸಲ್ಲಿಸಿದೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*