ಅಮೆರಿಕನ್ ಏರ್ ಲೈನ್ಸ್ ವಿಮಾನ & ಸೇನಾ ಹೆಲಿಕಾಪ್ಟರ್ ಮಧ್ಯೆ ಡಿಕ್ಕಿ: ಎರಡು ಶವ ಪತ್ತೆ

ಭಾಸ್ಕರ ಪತ್ರಿಕೆ
0


ಅಮೆರಿಕನ್ ಏರ್ ಲೈನ್ಸ್ ಪ್ರಯಾಣಿಕರ ವಿಮಾನವು ಯುಎಸ್ ಸೇನಾ ಹೆಲಿಕಾಪ್ಟರ್ ಗೆ ಡಿಕ್ಕಿ ಹೊಡೆದ ಘಟನೆ ವಾಷಿಂಗ್ಟನ್ ಬಳಿಯ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ನಡೆದಿದೆ. ಪೊಟೊಮ್ಯಾಕ್ ನದಿಯಿಂದ ಎರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅನೇಕ ಏಜೆನ್ಸಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಕಾನ್ಸಾಸ್ ನ ವಿಚಿತಾದಿಂದ ವಾಷಿಂಗ್ಟನ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ಜೆಟ್ ನಲ್ಲಿ 60 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಇದ್ದರು ಎಂದು ಅಮೆರಿಕನ್ ಏರ್ ಲೈನ್ಸ್ ತಿಳಿಸಿದೆ. ಈ ವಿಮಾನವನ್ನು ಪಿಎಸ್ಎ ಏರ್ ಲೈನ್ಸ್ ನಿರ್ವಹಿಸುತ್ತಿತ್ತು.
ಈ ಘಟನೆಯ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಬಳಿಯ ವಿಮಾನ ನಿಲ್ದಾಣದಿಂದ ಎಲ್ಲಾ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಗಳನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ವೇತಭವನ ಮತ್ತು ಕ್ಯಾಪಿಟಲ್ ನಿಂದ ದಕ್ಷಿಣಕ್ಕೆ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ವಿಶ್ವದ ಅತ್ಯಂತ ಬಿಗಿಯಾದ ನಿಯಂತ್ರಿತ ಮತ್ತು ಮೇಲ್ವಿಚಾರಣೆಯ ವಾಯುಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*