ಪದವಿ, ಪಿಯುಸಿ ಪಾಸ್ ಆದವರಿಗೆ  CBSEನಲ್ಲಿ 212 ಉದ್ಯೋಗಾವಕಾಶಗಳು

ಭಾಸ್ಕರ ಪತ್ರಿಕೆ
0


ಬೆಂಗಳೂರು: ಸೆಂಟ್ರಲ್ ಬೋರ್ಟ್ ಆಫ್ ಸೆಕೆಂಡರಿ ಎಜ್ಯುಕೇಶನ್ (CBSE)ನಲ್ಲಿ 212 ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿದೆ.

ಆಫೀಸ್ ಸೂಪರಿಂಟೆಂಡೆಂಟ್- 142 ಹುದ್ದೆಗಳು ಹಾಗೂ ಜೂನಿಯರ್ ಅಸಿಸ್ಟಂಟ್ — 70 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಅರ್ಹತೆ:

ಆಫೀಸ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸಾಗಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಮತ್ತು ವೇಗವಾಗಿ ಇಂಗ್ಲಿಷ್, ಹಿಂದಿ ಟೈಪಿಂಗ್ ಮಾಡುವ ಕೌಶಲ ಹೊಂದಿರಬೇಕು. ಗರಿಷ್ಠ ವಯೋಮಿತಿ 30.

ವಿದ್ಯಾರ್ಹತೆ:

ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಪಿಯುಸಿ ಅಥವಾ 10 + 2 ಪಾಸಾಗಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಮತ್ತು ವೇಗವಾಗಿ ಇಂಗ್ಲಿಷ್, ಹಿಂದಿ ಟೈಪಿಂಗ್ ಮಾಡುವ ಕೌಶಲ ಹೊಂದಿರಬೇಕು.

ಗರಿಷ್ಠ ವಯೋಮಿತಿ:  27. ಎರಡೂ ಹುದ್ದೆಗಳಿಗೆ ಮೀಸಲು ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಒಎಂಆರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ, ವಿವರಣಾತ್ಮಕ ಪರೀಕ್ಷೆ ಮತ್ತು ಟೈಪಿಂಗ್ ಕೌಶಲ ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಸಲು ಇದೇ ಜನವರಿ 31 ಕಡೆಯ ದಿನ. ಶುಲ್ಕ 1800. ಅರ್ಜಿ ಸಲ್ಲಿಸಲು, ವಿವರವಾದ ಅಧಿಸೂಚನೆ ನೋಡಲು ಹಾಗೂ ಹೆಚ್ಚಿನ ಮಾಹಿತಿಗೆ https://cbse.gov.in  ಪರಿಶೀಲಿಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*