ನಮ್ಮತುಮಕೂರು ವರದಿಯ ಬಿಗ್ ಇಂಪ್ಯಾಕ್ಟ್: ಕಲ್ಲು ಕ್ವಾರೇ,  ಕ್ರಷರ್ ಘಟಕದ ರಸ್ತೆ ಬಂದ್ ಮಾಡಿದ ಅರಣ್ಯ ಇಲಾಖೆ

ಭಾಸ್ಕರ ಪತ್ರಿಕೆ
0


ಕೊರಟಗೆರೆ: ಹೀರೆಬೆಟ್ಟ ರಕ್ಷಿತ ಅರಣ್ಯದ ಗಡಿಯನ್ನೇ ಮುಚ್ಚಿ ಗಣಿಗಾರಿಕೆಗೆ ಮಾಡಿದ ದಾರಿಯನ್ನೂ ಮುಲಾಜಿಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತೆರವುಗೊಳಿಸಿ ಕಲ್ಲು ಕ್ವಾರೇ ಮತ್ತು ಕ್ರಷರ್ ಘಟಕಕ್ಕೆ ಹೋಗುವ ದಾರಿಯ ಸಂಪರ್ಕದ ಮಾರ್ಗವನ್ನು ಕಡಿತಗೊಳಿಸಿದ್ದಾರೆ.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಿಕಲ್ಲು ಗ್ರಾಮದ ಸರ್ವೆ ನಂ.36ರಲ್ಲಿ ಪ್ರಾರಂಭ ಆಗಿರುವ ಕಲ್ಲು ಕ್ವಾರೆ ಮತ್ತು ಕ್ರಷರ್ ಪ್ರಾರಂಭಕ್ಕೆ ಅರಣ್ಯ ಇಲಾಖೆಯ ಗಡಿಯನ್ನು ಮುಚ್ಚಿ ರಸ್ತೆಯನ್ನು ಮಾಡಲಾಗಿತ್ತು.

ಅರಣ್ಯ ಇಲಾಖೆಯ ಗಡಿಯನ್ನು ಮುಚ್ಚಿ ರಸ್ತೆ ಮಾಡಿರುವ ಸುದ್ದಿಯನ್ನು ಭಾಸ್ಕರ ಪತ್ರಿಕೆ ವಾಹಿನಿಯಲ್ಲಿ ಸುದ್ದಿ ಬಿತ್ತಾರವಾಗಿತ್ತು. ಸುದ್ದಿ ತಿಳಿದ ತಕ್ಷಣವೇ ಅಧಿಕಾರಿಗಳ ತಂಡ ಸ್ಥಳಕ್ಕೆ ಹೋಗಿ ಜೆಸಿಬಿ ಮೂಲಕ ಟ್ರಾಂಚ್ ತಗೆದು ರಸ್ತೆಯ ಸಂಪರ್ಕ ಕಡಿತಗೊಳಿಸಿದ್ದಾರೆ.

ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ಗೆ ಪಾರಂಪರಿಕ ಕಲ್ಲು ಬಂಡೆ ಕಾರ್ಮಿಕರ ದೂರು:

ಗೌರಿಕಲ್ಲು, ದೊಗ್ಗನಹಳ್ಳಿ, ಮಲ್ಲೇಕಾವು ಮತ್ತು ಗೊಲ್ಲರಹಟ್ಟಿಯ ನೂರಾರುಜನ ಬಂಡೇ ಕಾರ್ಮಿಕರು ಗೌರಿಕಲ್ಲಿನಲ್ಲಿ ಪ್ರಾರಂಭ ಆಗಿರುವ ಕಲ್ಲುಗಣಿಗಾರಿಕೆ ವಿರೋಧಿಸಿ ತಹಶೀಲ್ದಾರ್ ಮಂಜುನಾಥ ಕೆ. ಮನವಿ ಸಲ್ಲಿಸಿ ಕಲ್ಲು ಕ್ವಾರೇ ಪ್ರಾರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ, ಗೌರಿಕಲ್ಲು ಕಲ್ಲುಗಣಿಕೆ ಸ್ಥಳಕ್ಕೆ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸುತ್ತೇವೆ. ಅರಣ್ಯ ವ್ಯಾಪ್ತಿಗೆ ಬಂದರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೀವಿ. ಬಂಡೆ ಕಾರ್ಮಿಕರ ಮನವಿಯನ್ನು ಸಹ ಪರಿಶೀಲನೆ ನಡೆಸುತ್ತೀವಿ ಎಂದು ಹೇಳಿದರು.

ತಿಮ್ಲಾಪುರ ಅಭಯಾರಣ್ಯದ ಕರಡಿ ಧಾಮ ಮತ್ತು ಹಿರೇಬೆಟ್ಟ ರಕ್ಷಿತ ಅರಣ್ಯದ ಮಧ್ಯೆಭಾಗದಲ್ಲಿ ನೀಡಿರುವ ಕಲ್ಲುಕ್ವಾರೇ ಮತ್ತು ಕ್ರಷರ್ ಘಟಕಕ್ಕೆ ನೀಡಿರುವ ಅನುಮತಿಯನ್ನು ಸ್ಥಗಿತ ಮಾಡಬೇಕು. ಬ್ಲಾಸ್ಟಿಂಗ್ ಪ್ರಾರಂಭವಾದ್ರೇ ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಗ್ರಾಮಕ್ಕೆ ಬರುವುದು ಖಚಿತ. ಜಿಲ್ಲಾಧಿಕಾರಿಗಳು ಮತ್ತೆ  ಪರಿಶೀಲನೆ ನಡೆಸಿ ಬಂಡೆ ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*