ಮಂಡ್ಯ: ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಗೃಹಿಣಿಯೊಬ್ಬರು ತಮ್ಮೂರಿನ ಸರ್ಕಾರಿ ಶಾಲೆಗೆ ವಾಟರ್ ಫಿಲ್ಟರ್ ಉಡುಗೊರೆಯಾಗಿ ನೀಡಿದ್ದು, ಅವರ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲಿನ ವಿಜಯಲಕ್ಷ್ಮೀ ಅವರು ಈ ಸಾಮಾಜಿಕ ಕಾರ್ಯ ಮಾಡಿದ್ದಾರೆ. ಅವರ ಈ ಸಮಾಜ ಸೇವೆಗೆ ಪತಿ ರಂಗನಾಥ್ ಕೂಡ ಸಾಥ್ ನೀಡಿದ್ದು ಹೆಚ್ಚುವರಿ ಹಣವನ್ನು ಬರಿಸಿದ ಅವರು ಫಿಲ್ಟರ್ ಕೊಳ್ಳಲು ಸಹಕರಿಸಿದ್ದಾರೆ.
ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಫಿಲ್ಟರ್ ನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರ ಸಾಮಾಜಿಕ ಸೇವೆಗೆ ಶಾಲೆಯ ವಿದ್ಯಾರ್ಥಿಗಳು ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಧನ್ಯವಾದಗಳನ್ನು ತಿಳಿಸಿದ್ದಾರೆ.

