ಫೆಬ್ರವರಿ 24ರಂದು  ಕಿಸಾನ್ ಸನ್ಮಾನ ನಿಧಿ 19 ನೇ ಕಂತಿನ ಹಣ ವರ್ಗಾವಣೆ ವೀಕ್ಷಣೆ ಸಮಾರಂಭ

ಭಾಸ್ಕರ ಪತ್ರಿಕೆ
0

ತಿಪಟೂರು:  ಪ್ರಧಾನಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ 19 ನೇ ಕಂತಿನ ಹಣವನ್ನು ನೇರ ರೈತರ ಖಾತೆಗೆ ವರ್ಗಾಯಿಸುವ ಕಾರ್ಯಕ್ರಮದ ನೇರ ವೀಕ್ಷಣೆ ಸಮಾರಂಭ ತಿಪಟೂರಿನಲ್ಲಿ ಫೆಬ್ರವರಿ 24ರಂದು ನಡೆಯಲಿದೆ,  ರೈಲ್ವೆ ಸಚಿವ ಹಾಗೂ ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಎಂದು ಕೊನೆ ಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಗೋವಿಂದೇಗೌಡ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆ.ಷಡಕ್ಷರಿ ಭಾಗವಹಿಸವರು ,  ಈ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ರೈತರು ಭಾಗವಹಿಸುವ ನಿರೀಕ್ಷೆಯಿದ್ದು,  ಇದೇ ವೇಳೆ ಕೆವಿಕೆ ವತಿಯಿಂದ ಕೃಷಿ ಮತ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಗೋವಿಂದೇಗೌಡ ಹೇಳಿದರು ಡಾ. ಶಿವಪ್ಪ ನಾಯಕ ಹಾಗೂ ಡಾ. ದರ್ಶನ್ ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*