ತಿಪಟೂರು: ಗ್ರಾಮಾಂತರ ತಾಲೂಕಿನ ಬಿಳಿಗೆರೆ ವಲಯದ ಅರಳುಗುಪ್ಪೆ ಗ್ರಾಮದ ಸಿದ್ದಗಂಗಮ್ಮ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಈ ದಿನ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಶ್ರೀ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಜಿಯವರು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸಮಾಜದ ಕಟ್ಟ ಕಡೆಯ ಜನರಿಗೆ ಈ ರೀತಿ ಸೂಕ್ತ ಆಶ್ರಯ ನೀಡುತ್ತಿರುವ ವೀರೇಂದ್ರ ಹೆಗ್ಗಡೆ ಅವರು ಮಾತೃಶ್ರೀ ಹೇಮಾವತಿಯ ಅಮ್ಮರವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶುಭ ನುಡಿದರು. ಹಿರಿಯರನ್ನು ಗೌರವಿಸೋಣ ಇಂದಲ್ಲ ನಾಳೆ ನಮ್ಮೆಲ್ಲರಿಗೂ ಮುಪ್ಪು ಬಂದೆ ಬರುತ್ತದೆ ಎಂದರು.
ತುಮಕೂರು ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಸತೀಶ್ ಸುವರ್ಣ ಸರ್ ಅವರುಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿ ಜ್ಞಾನ ವಿಕಾಸ ಕೇಂದ್ರದಲ್ಲಿ ಪ್ರತಿ ತಿಂಗಳು ಮಾಹಿತಿ ನೀಡುತ್ತಿರುವ ವಿಷಯಗಳ ಬಗ್ಗೆ ವಿಮರ್ಶೆ ಮಾಡಿದರು ಜಿಲ್ಲೆಯಲ್ಲಿ ಈ ವರ್ಷ 17 ಮನೆ ರಚನೆಯಾಗಿದ್ದು ತಿಪಟೂರು ತಾಲೂಕಿನಲ್ಲಿ ಒಟ್ಟು 185 ಫಲಾನುಭವಿಗಳಿಗೆ ಪ್ರತಿ ತಿಂಗಳು1000ರೂ ಹಾಗೆ ಮಾಶಾಸನ ನೀಡಲಾಗುತ್ತಿದೆ ಜೊತೆಗೆ ಆಯ್ದ ವಾತ್ಸಲ್ಯ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ಪಾತ್ರೆ ಬಟ್ಟೆ ಚಾಪೆ ದಿಂಬು ವಾತ್ಸಲ್ಯ MIX ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿಟೈಡ್ ಸಂಸ್ಥೆಯ ಎಕ್ಸಿಕ್ಯೂಟಿವ್ ಮ್ಯಾನೇಜರ್ ಆದಂತಹ ಶ್ರೀಮತಿ ಶೈಲಾಕುಮಾರಿ ಯೋಜನಾಧಿಕಾರಿಗಳಾದ ಸುರೇಶ ಕೆ,ಮತ್ತು ಗ್ರಾಮ STMC ಅಧ್ಯಕ್ಷರಾದ ರಾಜಣ್ಣ ಪಂಚಾಯತ್ ಸದಸ್ಯರಾದ ನೇತ್ರಾನಂದ ಒಕ್ಕೂಟದ ಅಧ್ಯಕ್ಷರು ಗೋವಿಂದರಾಜು ಉಪಾಧ್ಯಕ್ಷರು ಕೃಷ್ಣ ಮೂರ್ತಿ ಹಾಗೂ ಸದಸ್ಯರು ಊರಿನ ಮುಖಂಡರು ಹಾಗೂ ಜ್ಞಾನವಿಕಾಸ ಸಮನ್ವಯಅಧಿಕಾರಿ ಭಾಗ್ಯಲಕ್ಷ್ಮಿ ವಲಯದ ಮೇಲ್ವಿಚಾರಕರಾದ ರಮೇಶ್ ಸೇವಾಪ್ರತಿನಿಧಿ ಶೈಲಾ , VLE ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

