ತಾನು ಐಸಿಸಿ ಅಧ್ಯಕ್ಷ ಎಂದು ಹೇಳಿಕೊಂಡು ಮೂರು‌ ನಾಮ ಹಾಕಿದ: ಶಾಸಕನಿಂದ 5 ಲಕ್ಷ ಕೇಳಿದ್ದ ವ್ಯಕ್ತಿ ಅರೆಸ್ಟ್

ಭಾಸ್ಕರ ಪತ್ರಿಕೆ
0


ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಎಂದು ಹೇಳಿಕೊಂಡು ಸ್ಥಳೀಯ ಬಿಜೆಪಿ ಶಾಸಕರೊಬ್ಬರಿಂದ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ವ್ಯಕ್ತಿಯನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರಿಯಾಂಶು ಪಂತ್ ಎಂದು ಗುರುತಿಸಲಾಗಿದ್ದು ಈತನೊಂದಿಗೆ ಭಾಗಿಯಾಗಿದ್ದಕ್ಕಾಗಿ ಇನ್ನೂ ಇಬ್ಬರನ್ನು ಗುರುತಿಸಲಾಗಿದೆ. ಅವರಲ್ಲಿ ಒಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಇನ್ನೊಬ್ಬ ಪರಾರಿಯಾಗಿದ್ದಾರೆ.

ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಸಿಂಗ್ ದೋಬಲ್ ಈ ಕುರಿತು ಮಾತನಾಡುತ್ತಾ, 19 ವರ್ಷದ ಪಂತ್ ಅವರನ್ನು ಸೋಮವಾರ ದೆಹಲಿಯಲ್ಲಿ ಬಂಧಿಸಲಾಗಿದ್ದು, ಉವೇಶ್ ಅಹ್ಮದ್ ಅವರನ್ನು ಗುಡ್ಡಗಾಡು ರಾಜ್ಯದ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಪುರದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಗೌರವ್ ನಾಥ್ ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ದೋಬಲ್ ಹೇಳಿದ್ದಾರೆ.

ಹರಿದ್ವಾರದ ರಾಣಿಪುರದ ಬಿಜೆಪಿ ಶಾಸಕ ಆದೇಶ್ ಚೌಹಾಣ್ ಅವರಿಂದ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಲ್ಲದೆ, ಮೂವರು ಆರೋಪಿಗಳು ನೈನಿತಾಲ್ ಶಾಸಕಿ ಸರಿತಾ ಆರ್ಯ ಮತ್ತು ರುದ್ರಾಪುರ ಶಾಸಕ ಶಿವ ಅರೋರಾ ಅವರನ್ನು ಸಚಿವರನ್ನಾಗಿ ಮಾಡುವುದಾಗಿ ಭರವಸೆ ನೀಡಿ ಅವರಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸಿದ್ದರು ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*