ಹೂವಿನ ಹಡಗಲಿ: ಶೈಕ್ಷಣಿಕ ಕಾರ್ಯಾಗಾರ ಸಂಪನ್ನ

ಭಾಸ್ಕರ ಪತ್ರಿಕೆ
0

ಹೂವಿನ ಹಡಗಲಿ:  ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಮತ್ತು ಶ್ರೀ ಜ್ವಾಲಮಾಲಿನಿ  ಮಹಿಳಾ ಸಮಾಜ ಹೂವಿನಡಗಲಿ ಇವರ ಸಂಯುಕ್ತ ಆಶ್ರಯದಲ್ಲಿ  ಇಲ್ಲಿನ ತುಂಗಭದ್ರ ಪ್ರೌಢಶಾಲೆಯಲ್ಲಿ  ಎಸ್.ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ,ಪರೀಕ್ಷೆ ಹೇಗೆ ಬರೆಯಬೇಕು, ಹೇಗೆ ಎದುರಿಸಬೇಕು ಎಂಬ ಬಗ್ಗೆ  ಸಲಹೆ ಹಾಗೂ ಮಾರ್ಗದರ್ಶನ ನೀಡಲಾಯಿತು.

ಪರೀಕ್ಷೆಯಲ್ಲಿ ಫೇಲಾದರೂ ವಿದ್ಯಾರ್ಥಿಗಳಲ್ಲಿರುವ ಸದಾವಕಾಶಗಳು, ಇನ್ನಿತರ ವಿಚಾರಗಳನ್ನು ಹಾಗೂ ಯಾವುದೇ ಅನಾಹುತಗಳಿಗೆ ಎಡೆ ಮಾಡಿಕೊಡದಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜ್ವಾಲಾಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷ ಎಂ.ಡಿ.ಪದ್ಮಾವತಿ, ಉಪಾಧ್ಯಕ್ಷ ರಾದ ಜಯಶ್ರೀ ಮಂಜುನಾಥ್ ಜೈನ,ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸೀಮಾ ಪ್ರಶಾಂತ್ ಹೊಳಲು ಕಾರ್ಯದರ್ಶಿ ಚಂಪಾರಾಯಪ್ಪ ಹೊಳಲು, ಖಜಾಂಚಿ ಮೇಘ  ಬಾಗೇಶ ಜೈನರ್, ಸದಸ್ಯರಾದ ಪದ್ಮ ಅಜಿತ್ ಹೊಳಲು, ವೈಶಾಲಿ ಅಮಿತ್ ಹೊಳಲು, ಭಾಗವಹಿಸಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗಳಿಗೆ ಪೆನ್ಸಿಲ್ ಗಳನ್ನು ವಿತರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*