ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಶ್ರೀ ಕಾಳಮ್ಮನ ಬೆಟ್ಟದಲ್ಲಿ 1-02-2025 ಶನಿವಾರ ಹಾಗೂ ಭಾನುವಾರ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜನಾಂಗದವರಿಂದ ಲೋಕಕಲ್ಯಾಣರತ್ವವಾಗಿ ಚಂಡಿಕಾ ಹೋಮ ಹಾಗೂ ಸಾಮೂಹಿಕ ಉಪನಯನ ವಾರ್ಷಿಕೋತ್ಸವ ಏರ್ಪಡಿಸಲಾಗಿತ್ತು ಹೋಮ ಮತ್ತು ಬ್ರಹ್ಮಪದೇಶವನ್ನು ಬೆಂಗಳೂರಿನ ನವೀನ್ ಶರ್ಮ ಸಂಗಡಿಗರು ಹೋಮದ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮಧುಗಿರಿ ತಾಲೂಕಿನ ನಿತ್ರಳ್ಳಿ ಮಠದ ಶ್ರೀ ಶ್ರೀ ಶ್ರೀ ನೀಲಕಂಠ ಸ್ವಾಮೀಜಿಯವರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷರಾದ ನಿಂಗಚಾರ್ ಕಾರ್ಯದರ್ಶಿ ಮರಿಯಾಚಾರ್ ಗಣೇಶಚಾರ್ ಜಗದೀಶ್ ಅಚಾರ್ ಬಳುವನೇರಲು ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದಯ್ಯನವರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಹಾಜರಿದ್ದರು ಈ ಸಂದರ್ಭದಲ್ಲಿ ಎಲ್ಲ ಭಕ್ತಾದಿಗಳು ಮಹಿಳೆಯರಿಗೆ ಹಾಗೂ ಪುರುಷರಿಗೆ ಶೌಚಾಲಯ ಹಾಗೂ ಸ್ನಾನ ಮಾಡುವುದು ವ್ಯವಸ್ಥೆ ಇಲ್ಲದೇ ಇರುವುದರಿಂದ ಮುಜರಾಯಿ ಇಲಾಖೆಯ ದೇವಾಲಯಕ್ಕೆ ಒಳಪಟ್ಟಿದ್ದರು ಶೌಚಾಲಯ ಇಲ್ಲದೇ ಇರುವುದರಿಂದ ತಾಸಿಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ವಿಶ್ವಕರ್ಮ ಗುರುಗಳು ದೇವಾಲಯಕ್ಕೆ ಮೂಲಭೂತ ಸೌಕರ್ಯಗಳು ಇಲ್ಲದೇ ಇರುವುದರಿಂದ ತಾಸಿಲ್ದಾರ್ ಬೇಜವಾಬ್ದಾರಿಯಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಮುಂದಿನ ದಿನಗಳಲ್ಲಿ ತಹಸಿಲ್ದಾರ್ ಕಚೇರಿ ಮತ್ತು ಜಿಲ್ಲಾ ಕಚೇರಿಗೆ ಮಂದಿ ಮುಂದೆ ಹೋರಾಟ ಮಾಡುವುದಾಗಿ ವಿಶ್ವಕರ್ಮ ಗುರುಗಳ ನೇತೃತ್ವದಲ್ಲಿ ಜನಾಂಗದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಕಾಮೆಂಟ್ ಪೋಸ್ಟ್ ಮಾಡಿ
0ಕಾಮೆಂಟ್‌ಗಳು
3/related/default
