ತಿಪಟೂರು: ದಿನಾಂಕ ೨೭-೦೩-೨೦೨೫ ರಂದು, ನಗರದ, ಶಂಕರ್ ರಸ್ತೆಯಲ್ಲಿರುವ, ಕಲ್ಲು ಬಿಲ್ಡಿಂಗ್ ನ ಭಾಗವಾದ, ಹಿರಿಯ ಕಲಾವಿದರಾದ ಶ್ರೀಯುತ ಬಿ.ಎಸ್. ಸುಬ್ಬಣ್ಣನವರ ಮನೆಯಲ್ಲಿ, ಮುಂಜಾನೆ ಆರು ಘಂಟೆಗೆ ವೇದಬ್ರಹ್ಮಶ್ರೀ. ಶ್ರೀನಿವಾಸಮೂರ್ತಿ ಯವರ ನೇತೃತ್ವದಲ್ಲಿ ಪ್ರಾರಂಭವಾದ, ಶ್ರೀಗಣಪತಿ, ನವಗ್ರಹ, ಮೃತ್ಯುಂಜಯ, ವಾಸ್ತು ಹೋಮಗಳ ಪೂರ್ಣಾಹುತಿ ಒಂಭತ್ತೂವರೆಗೆ ಮುಗಿದು, ಮಾತೆಯರು ಗೋಪೂಜೆ ಮಾಡಿ, ಹಾಲುಕ್ಕಿಸಿ, ದೀಪ ಬೆಳಗಸಿ, ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ, ಶಿವ ಪಂಚಾಕ್ಷರ ನಕ್ಷತ್ರಮಾಲಿಕಾ ಸ್ತೋತ್ರ ಪಾರಾಯಣ ಮಾಡಿ, ವಿದ್ಯುಕ್ತವಾಗಿ ನಮ್ಮ ಸಮಿತಿಯ "ರಜತಮಹೋತ್ಸವ" ಸಂಘದ "ಶತಾಬ್ದಿವರ್ಷ" ಲೋಕಮಾತೆ "ಅಹಲ್ಯಾಬಾಯಿ ಹೋಳ್ಕರ್" ರವರ "ಮುನ್ನೂರನೇ ಜನ್ಮವರ್ಷ" ನಮ್ಮ ಕನ್ನಡ ನಾಡಿನ "ರಾಣಿ ಅಬ್ಬಕ್ಕ" ನವರ ಐನೂರನೇ ಜನ್ಮವರ್ಷಾಚರಣೆ ಕಾರ್ಯಗಳಿಗೆ ಚಾಲನೆ ನೀಡಲಾಯ್ತು.
ಇದಕ್ಕೆ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರಾದ ಶ್ರೀಯುತ ಶ್ರೀಪತಿಯವರು, ಪ್ರಾಂತ ಸಂಘಟನಾ ಮಂತ್ರಿ ಶ್ರೀಯುತ ರಾಮಚಂದ್ರರವರು, ಜಿಲ್ಲಾ ಕಾರ್ಯವಾಹ ಶ್ರೀಯುತ ರವೀಂದ್ರ ತೆಗ್ಗಿನಮನಿಯವರು ಜಿಲ್ಲಾಅಧ್ಯಕ್ಷರಾದ ಶ್ರೀಯುತ ದೇವಪ್ರಸಾದ್ ರವರು ಉಪಸ್ಥಿತರಿದ್ದು, ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದ ನಂತರ ಬಂದವರೆಲ್ಲರಿಗೂ ಕೈ ಊಟದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
