ಉತ್ತರಾಖಂಡ್ ನಲ್ಲಿ ಹಿಮಪಾತ: 33 ಕಾರ್ಮಿಕರ ರಕ್ಷಣೆ

ಭಾಸ್ಕರ ಪತ್ರಿಕೆ
0

ಉತ್ತರಾಖಂಡದ ಚಮೋಲಿ ಜಿಲ್ಲೆಯ ಎತ್ತರದ ಗ್ರಾಮವಾದ ಮಾನಾದಲ್ಲಿ ಹಿಮಪಾತದ ಅಡಿಯಲ್ಲಿ ಸಿಲುಕಿದ್ದ ಒಟ್ಟು 55 ಬಿಆರ್ ಓ ಕಾರ್ಮಿಕರಲ್ಲಿ 33 ಜನರನ್ನು ರಕ್ಷಿಸಲಾಗಿದೆ.

ಉಳಿದ 22 ಜನರ ಸುರಕ್ಷತೆಯ ಬಗ್ಗೆ ಇನ್ನೂ ಆತಂಕವಿದೆ.
ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನವೀಕರಿಸಿದ ಉತ್ತರಾಖಂಡದ ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್, ಸಿಕ್ಕಿಬಿದ್ದ 33 ಕಾರ್ಮಿಕರನ್ನು ರಕ್ಷಿಸಲಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆ 22 ಜನರನ್ನು ಪತ್ತೆಹಚ್ಚಬೇಕಾಗಿದೆ ಎಂದು ಹೇಳಿದ್ದಾರೆ.

ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್ ಓ) ಶಿಬಿರದಲ್ಲಿ ಹಿಮಪಾತದಲ್ಲಿ ಸಿಲುಕಿರುವ 57 ಕಾರ್ಮಿಕರಲ್ಲಿ ಇಬ್ಬರು ರಜೆಯಲ್ಲಿದ್ದರು ಮತ್ತು ಸಿಕ್ಕಿಬಿದ್ದ ಕಾರ್ಮಿಕರ ನಿಜವಾದ ಸಂಖ್ಯೆ 55 ಎಂದು ನಂತರ ತಿಳಿದುಬಂದಿದೆ ಎಂದು ಸುಮನ್ ಹೇಳಿದ್ದಾರೆ.

ಇವರಲ್ಲಿ 33 ಜನರನ್ನು ರಕ್ಷಿಸಲಾಗಿದ್ದು, 22 ಜನರನ್ನು ಇನ್ನೂ ಪತ್ತೆಹಚ್ಚಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*