ತಿಪಟೂರು: ನಗರದ ಶ್ರೀ ಶಾರದಾ ದೇವಿ ಚಾರಿಟಬಲ್ ಟ್ರಸ್ಟ್‌ನ ಹಿರಿಯರ ಮನೆ ವೃದ್ಧಾಶ್ರಮದ ಹಿರಿಯರಿಗೆ ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ. ರಕ್ಷಿತ್ ಗೌಡರವರು ಬಟ್ಟೆ ಮತ್ತು ಹಣ್ಣು, ಹಂಪಲುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ರಾಮಣ್ಣ, ಶ್ರೀನಿವಾಸ್, ಗಂಗಾಧರ್ ಮತ್ತಿತರರಿದ್ದರು.

