ಆನೆಯ ಉಸಿರಾಟದ ಶಬ್ದ ಕೇಳಿ ಟಾರ್ಚ್ ಹಾಕಿದ ರೈತನನ್ನು ಎತ್ತಿ ಮರಕ್ಕೆ ಅಪ್ಪಳಿಸಿದ ಕಾಡಾನೆ!

ಭಾಸ್ಕರ ಪತ್ರಿಕೆ
0

ಚಿಕ್ಕಮಗಳೂರು: ಒಂಟಿ ಸಲಗದ ದಾಳಿಗೆ ರೈತನೋರ್ವ ಜೀವ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗುರುಪುರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ವೆಂಕಟೇಶ್ (58) ಎಂದು ಗುರುತಿಸಲಾಗಿದೆ. ಮೃತ ವೆಂಕಟೇಶ್ ಮನೆ ಮುಂದೆ ತೋಟದಲ್ಲಿ ಹಸು ಕಟ್ಟುವಾಗ ಆನೆ ದಾಳಿ ನಡೆಸಿದೆ.

ಆನೆಯ ಉಸಿರಾಟದ ಶಬ್ಧ ಕೇಳಿ ವೆಂಕಟೇಶ್ ಬ್ಯಾಟರಿ ಬಿಟ್ಟದ್ದ.ಈ ವೇಳೆ ಆನೆ ವೆಂಕಟೇಶ್ ನನ್ನು ಸೊಂಡಿಲಿನಿಂದ ಎತ್ತಿ ಮರಕ್ಕೆ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ವೆಂಕಟೇಶ್ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಒಂಟಿ ಸಲಗದ ಕಾಟಕ್ಕೆ ಬೇಸತ್ತಿರೋ ಲಕ್ಕವಳ್ಳಿ ಹೋಬಳಿ ಜನ ಪರಿಹಾರ ಜೀವ ತರಲ್ಲ, ಆನೆಯನ್ನ ಸ್ಥಳಾಂತರಿಸುವಂತೆ ಮನವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*