ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಕೆ.ಷಡಕ್ಷರಿ ಭೇಟಿ: ರೈತರಿಂದ ದೂರು ಬಂದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಶಾಸಕರು

ಭಾಸ್ಕರ ಪತ್ರಿಕೆ
0

 

ತಿಪಟೂರು: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಿರುವ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಹೆಚ್ಚವರಿ ಅಧಿಕಾರಿಗಳು 3ಕೆ.ಜಿ ರಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆ ಶಾಸಕ ಕೆ.ಷಡಕ್ಷರಿ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈತರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಶಾಸಕರು,ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗಬಾರದು,ರೈತರಿಂದ ಕ್ವಿಂಟಲ್ ಕಸಕಡ್ಡಿ ಧೂಳು ಇರುತ್ತದೆ ಎಂದು 3ಕೆ.ಜಿ ರಾಗಿ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ಪ್ರತಿ ಚೀಲಕ್ಕೆ ಅರ್ಧ ಕೆ.ಜಿ ರಾಗಿ ಹೊರತುಪಡಿಸಿ, ಹೆಚ್ಚುವರಿ ರಾಗಿ ಪಡೆದರೆ ನಿಮ್ಮ ಮೇಲೆ ಕಟ್ಟನಿಟ್ಟಿನ ಕ್ರಮಕೈಗೊಳ್ಳುತ್ತೇವೆ.

ರೈತರು ಕಷ್ಟಪಟ್ಟು ರಾಗಿ ಬೆಳೆದು ಮಾರಾಟ ಮಾಡುತ್ತಿದ್ದಾರೆ, ಆದರೆ ನೀವು, ರೈತರಿಂದ ಹಣ ವಸೂಲಿ ಮಾಡುವುದು,ಹೆಚ್ಚುವರಿ ರಾಗಿ ಪಡೆಯುವುದು ಮಾಡಿದರೆ, ಕ್ರಮ ಎದುರಿಸಬೇಕಾಗುತ್ತದೆ, ರೈತರು ಯಾವುದೇ ಕಾರಣಕ್ಕೂ ಆತುರ ಪಟ್ಟು ಖಾಸಗೀ ವ್ಯಕ್ತಿಗಳಿಗೆ, ಕಡಿಮೆ ಬೆಲೆಗೆ ರಾಗಿ ಮಾರಾಟ ಮಾಡಬೇಡಿ,ನಿಮ್ಮ ಎಲ್ಲಾ ರಾಗಿಯನ್ನೂ ಸರ್ಕಾರ ನಿಗಧಿತ ಕಾಲದೊಳಗೆ ಕೊಂಡುಕೊಳ್ಳತ್ತದೆ,ಸ್ವಲ್ಪ ತಡವಾದರೂ ನಿಮ್ಮ ಖಾತೆಗೆ ಹಣಜಮಾ ಮಾಡುತ್ತೇವೆ,ಎಂದು ತಿಳಿಸಿದರು. ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ್ರ, ರಾಗಿ ಖರೀದಿ ಕೇಂದ್ರದ ಅಧಿಕಾರಿ ಲೋಕೇಶ್, ಸೇರಿದಂತೆ ಅನೇಕರು ಉಪಸ್ಥಿತರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*