ತುಮಕೂರು: ಸಹಕಾರಿ ಸಚಿವರ ತವರಲ್ಲಿ 40% ಕಮಿಷನ್ ಆರೋಪ ಕೇಳಿ ಬಂದಿದೆ. ಭ್ರಷ್ಟಾಚಾರದ ಆಡಿಯೋ ವಿಡಿಯೋ ನಮ್ಮತುಮಕೂರು ವಾಹಿನಿಗೆ ಲಭ್ಯವಾಗಿದೆ.
20 ಲಕ್ಷದ ಪಿಡ್ಲ್ಯೂಡಿ ಇಲಾಖೆಯ ಕಾಮಗಾರಿಯ ಕೊಡುವುದಾಗಿ 3ಲಕ್ಷ 20 ಸಾವಿರ ಅಡ್ವಾನ್ಸ್ ಕಮಿಷನ್ ಪಡೆದ ಕಥೆ ಇದು ನೋಡಿ.
ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಕ್ಷೇತ್ರದ ಪಿಡ್ಲ್ಯೂಡಿ ಇಲಾಖೆಯ ಎಇಇ ಲಂಚಬಾಕತನ ಬಯಲಾಗಿದೆ. ಕೊನೆಗೆ 20 ಲಕ್ಷ ಅನುದಾನವು ಇಲ್ಲ.. ಲಂಚ ಪಡೆದ ಕಮಿಷನ್ ಹಣವೂ ನೀಡದೇ ಗುತ್ತಿಗೆದಾರನಿಗೆ ಬೇರೊಬ್ಬರ ಚೇಕ್ ನೀಡಿ ವಂಚಿಸಿದ ಆರೋಪ ಪಿಡ್ಲ್ಯೂಡಿ ಎಇಇ ವಿರುದ್ಧ ಕೇಳಿ ಬಂದಿದೆ.
ಮಧುಗಿರಿ ತಾಲೂಕು ಪಿಡ್ಲ್ಯೂಡಿ ಇಲಾಖೆಯ ಎಇಇ ರಾಜಗೋಪಾಲ ಎಂಬಾತ ಪಿಡ್ಲ್ಯೂಡಿ ಗುತ್ತಿಗೆದಾರ ಶ್ರೀರಂಗ ಎಂಬಾತನ ಹೆಸರಿನಲ್ಲಿ 3 ಲಕ್ಷ 20 ಸಾವಿರದ ಚೆಕ್ ನೀಡಿರುವುದಾಗಿ ಬ್ರಹ್ಮಸಮುದ್ರ ಗ್ರಾಪಂಯ ಮಾಜಿ ಅಧ್ಯಕ್ಷ ಚೀಲನಹಳ್ಳಿ ಸುರೇಶ್ ಎಂಬವರು ಮಾಧ್ಯಮದ ಮುಂದೆ ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಹೆಚ್ಚಿದ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. 20ಲಕ್ಷದ ಕೆಲಸದ ಕಾಮಗಾರಿಯ ಗುತ್ತಿಗೆ ನೀಡುವ ಆಮಿಷವೊಡ್ಡಿ ಶ್ರೀರಂಗನ ಮೂಲಕ ಪಿಡ್ಲ್ಯೂಡಿ ಎಇಇ 3 ಲಕ್ಷ 20 ಸಾವಿರ ರೂ. ಲಂಚ ಪಡೆದ ಆರೋಪ ಇದೀಗ ಕೇಳಿ ಬಂದಿದೆ.

