
ಬೆಂಗಳೂರು: ನಗರದ ಬಸವ ನಗರದ ಬಸವ ಸೇವಾ ಸಮಿತಿ ಇವರು ಜಗಜ್ಯೋತಿ ಗುರು ಬಸವಣ್ಣನವರ ೮೯೨ನೆ ಜಯಂತಿಯ ಅಂಗವಾಗಿ ಹಮ್ಮಿಕೊಂಡಿರುವ ವಚನಕಂಠಪಾಠ ಸ್ಪರ್ಧೆಯಲ್ಲಿ ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿಯವರು ಭಾಗವಹಿಸಿ ೫೦೧ ವಚನಗಳನ್ನು ಹೇಳಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಬೆಳಿಗ್ಗೆ ೮ ಘಂಟೆಗೆ ಕೆ.ಆರ್.ಪುರ ದ ಶಾಸಕರಾದ ಶ್ರೀ ಬೈರತಿ ಬಸವರಾಜರವರು ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ವಚನ ಕಂಠಪಾಠವನ್ನು ಉದ್ಘಾಟನೆ ಮಾಡಿದರು.
ಬೆಳಿಗ್ಗೆ ೮:೦೦ ಗಂಟೆಯಿಂದ ೪:೦೦ ಗಂಟೆಯವರೆಗೆ ನಡೆದ ಕಾರ್ಯಕ್ರದಲ್ಲಿ ೫ಗಂಟೆ ೧೦ ನಿಮಿಷಗಳ ಕಾಲ ಸತತವಾಗಿ ವಚನಗಳನ್ನು ಕಂಠಪಾಠವಾಗಿ ಹೇಳಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ. ಸಂಜೆ ನಡೆದ ಕಾರ್ಯಕ್ರಮದಲ್ಲಿ ೨೫೦೦೦/- ರೂಪಾಯಿ ಬಹುಮಾನ ನೀಡಿ ಗೌರವಿಸಿದರು
ಗುರುಬಸವಣ್ಣನವರು, ಜಗನ್ಮಾತೆ ಅಕ್ಕಮಹಾದೇವಿಯವರ, ಮತ್ತು ಗುರು ಸಿದ್ಧರಾಮೇಶರರ ಸ್ತೋತ್ರ ತ್ರಿವಿಧಿಯಿಂದ ವಚನಗಳನ್ನು ಆಯ್ಕೆ ಮಾಡಿಕೊಂಡಿದ್ದರು.
ಬಸವ ಸೇವಾ ಸಮಿತಿ ಪರವಾಗಿ ಶರಣರತ್ನ ಸಚ್ಚಿದಾನಂದ ಚಟ್ಳಿಯವರಿಗೆ ಶರಣ ಮಲ್ಲಿಕಾರ್ಜುನ ಹಂಜಿ ಅಧ್ಯಕ್ಷರು ಬಸವ ಸೇವಾ ಸಮಿತಿ ಅಭಿನಂದನೆ ತಿಳಿಸಿದ್ದಾರೆ.
