ತಿಪಟೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಡೆಯುವ ಜಾತಿ ಜನಗಣತಿಯಲ್ಲಿ ತಾಲೂಕಿನ ವಿಶ್ವಕರ್ಮ ಸಮಾಜದವರು ವಿಶ್ವಕರ್ಮ ಎಂದೇ ಬರೆಯಿಸಬೇಕು ಎಂದು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ಡಾ. ಭಾಸ್ಕರಾಚಾರ್ ತಿಳಿಸಿದ್ದಾರೆ. ಗಣತಿದಾರರು ಜಾತಿ ಜನಗಣತಿಗೆ ಬಂದಾಗ ಆಚಾರ್, ಬಡಗಿ, ಕಂಬಾರ ಎಂದು ಹೇಳದೆ ಎಲ್ಲರೂ ವಿಶ್ವಕರ್ಮ ಎಂದು ಹೇಳಿ ನಮೂದಿಸಬೇಕು. ಪ್ರವರ್ಗಗಳನ್ನು ಹೇಳಿ ನಮ್ಮ ನೈಜ ಜನಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ಬೇಡ.
ಈ ದೃಷ್ಠಿಯಿಂದ ನಮ್ಮ ಜನಸಂಖ್ಯೆ ಎಷ್ಟು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. ಸಮಾಜದ ಹಿರಿಯರು, ಯುವಕರು ಗ್ರಾಮೀಣ ಭಾಗಗಳಲ್ಲಿನ ಸಮಾಜ ಬಂಧುಗಳಿಗೆ ಈ ಮಾಹಿತಿ ತಿಳಿಸಿ ಎಂದು ಮನವಿ ಮಾಡಿದ್ದಾರೆ.

