ತಿಪಟೂರು: ಪಹಲ್ಗಾಮ್ ನಲ್ಲಿ ಅಮಾಯಕ ನಾಗರೀಕರ ಮೇಲೆ ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತಿಯಾಗಿ ನಮ್ಮ ದೇಶದ ವೀರಸೈನಿಕರು ಕಾರ್ಯಾಚರಣೆ ನಡೆಸಿ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ಥಾನದ ಉಗ್ರರ ಹೆಡೆಮುರಿಕಟ್ಟಿದ್ದಾರೆ, ಸೈನಿಕರು ರಾಷ್ಟ್ರ ರಕ್ಷಣೆಗಾಗಿ ತೋರಿದ ಧೈರ್ಯ. ಶೌರ್ಯ ಬೆಂಬಲಿಸಿ ತಿಪಟೂರು ನಾಗರಿಕರಿಂದ ಮೇ 28ರಂದು ಬುಧವಾರ ತಿಪಟೂರು ಬೃಹತ್ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಮುಖ್ಯಸ್ಥ.ನಾಗರೀಕ ಸಂಘಟನೆಗಳ ಪ್ರಾಥಮಿಕ ತಿರಂಗಯಾತ್ರೆ ರೂಪರೇಷೆಗಳ ಬಗ್ಗೆ ಚರ್ಚೆ ನಡೆದಿದೆ. ಭಯೋತ್ಪಾದ ರಾಷ್ಟ್ರ ಪಾಕಿಸ್ಥಾನಕ್ಕೆ ನುಗ್ಗಿ ಹೊಡೆದು, ಉಗ್ರರ ಹಡಗುತಾಣಗಳನ್ನು ನಾಶಮಾಡಿರುವ,ಆಪರೇಷನ್ ಸಿಂಧೂರ ಕಾರ್ಯಾಚರಣೆ ಬೆಂಬಲಿಸಿ ತಿಪಟೂರಿನಲ್ಲಿ ಬೃಹತ್ ತಿರಂಗ ಯಾತ್ರೆ ನಡೆಸಲಾಗುವುದು.
ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕುಮಾರ್ ಆಸ್ಪತ್ರೆ ಖ್ಯಾತ ವೈದ್ಯರಾದ ಡಾ // ಶ್ರೀಧರ್ . ಮನವಿ ಮಾಡಿದ್ದಾರೆ.ಸಭೆಯಲ್ಲಿ ಸತೀಶ್ ,ನಗರಾಧ್ಯಕ್ಷ ಜಗದೀಶ್ ಹಿಂದೂಪರ ಸಂಘಟನೆಗಳ ಮುಖಂಡರಾದ ಹಳ್ಳಿಕಾರ್ ವಿನಯ್, ಮಡೆನೂರು ಬಾಳೆಕಾಯಿ ನಟರಾಜ್ .ಗಾಡಿ ಮಂಜುನಾಥ್ ರಂಗಾಪುರ ಗ್ರಾಮಪಂಚಾಯತಿ ಅಧ್ಯಕ್ಷ ಹೊಸಳ್ಳಿ ವಿಶ್ವನಾಥ್ .ಕುಮಾರ್ ಆಸ್ಪತ್ರೆ ಖ್ಯಾತ ವೈದ್ಯರಾದ ಡಾ // ಶ್ರೀಧರ್, ದೇಶಾಭಿಮಾನ ಭಕ್ತರು ಮುಂತ್ತಾದವರು ಉಪಸ್ಥಿತರಿದರು.

