ಬಿಜೆಪಿಯಲ್ಲಿ ಮತ್ತೆ ಆರಂಭವಾಯ್ತಾ ಮುಸುಕಿನ ಗುದ್ದಾಟ?

ಭಾಸ್ಕರ ಪತ್ರಿಕೆ
0

ತುಮಕೂರು: ಬಿಜೆಪಿಯಲ್ಲಿ ಮತ್ತೆ ಬಂದ ಬಣ ಪ್ರತಿಷ್ಠೆ ಮುನ್ನೆಲೆಗೆ ಬಂದಿದೆ ಎನ್ನಲಾಗುತ್ತಿದೆ. ಬಿಜೆಪಿಯ ರೆಬೆಲ್ ಶಾಸಕರಾಗಿದ್ದ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ವಿ. ಸೋಮಣ್ಣ ಹಾಗೂ ಬಿ.ವೈ. ವಿಜಯೇಂದ್ರ ಮುಸುಕಿನ ಗುದ್ದಾಟ ಸ್ಫೋಟಗೊಂಡಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ತುಮಕೂರಿನಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ತಿರಂಗ ಯಾತ್ರೆಯಲ್ಲಿ ಇಂತಹದ್ದೊಂದು ಅನುಮಾನ ಸೃಷ್ಟಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬರುವ ಮುನ್ನವೇ ಸಚಿವ ಸೋಮಣ್ಣ, ಎಂಎಲ್ ಸಿ ಜಗ್ಗೇಶ್ ತರಾತುರಿಯಲ್ಲಿ ಹೊರಟಿರುವ ಘಟನೆ ನಡೆದಿದೆ.

ಆಪರೇಷನ್ ಸಿಂಧೂರ ಯಶಸ್ವಿ ಹಿನ್ನಲೆ ತಿರಂಗ ಯಾತ್ರೆ ಆಯೋಜಿಸಲಾಗಿತ್ತು. ನಿಗದಿತ ಸಮಯಕ್ಕೂ ಮುನ್ನವೇ ಎಸ್ ಐಟಿ ಮುಂಭಾಗ ಹಾಜರಾಗಿದ್ದ ವಿ.ಸೋಮಣ್ಣ, ಜಗ್ಗೇಶ್ ತಿರಂಗ ಯಾತ್ರೆಗೆ ತರಾತುರಿ ಚಾಲನೆ ನೀಡಿದ ಬಳಿಕ ಇಬ್ಬರು ನಾಯಕರು ಮೆರವಣಿಗೆ ವೇಳೆ ನಾಪತ್ತೆಯಾಗಿದ್ದರು.

ಯಾತ್ರೆಯ ಅರ್ಧ ದೂರದವರೆಗೆ ಇರುವಂತೆ ಸ್ಥಳೀಯ ನಾಯಕರ ಮನವಿಗೂ ಡೋಂಟ್ ಕೇರ್ ಮಾಡಿದ್ದಾರೆನ್ನಲಾಗಿದೆ. ಬಿ.ವೈ.ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರೋ ಶಾಸಕರಾದ ಜ್ಯೋತಿ ಗಣೇಶ್, ಗ್ರಾಮಾಂತರ ಶಾಸಕ ಸುರೇಶ್ ಗೌಡ ಯಾತ್ರೆ ಅಂತಿಮದವರೆಗೂ ಸಾಥ್ ನೀಡಿದ್ದರು.

ಇನ್ನೂ ಕ್ಷೇತ್ರದ ಯಾವುದೇ ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮದಲ್ಲಿ ಈವರೆಗೆ ಬಿಎಸ್ ವೈ ಹಾಗೂ ವಿಜಯೇಂದ್ರ ಹೆಸರನ್ನು ಸೋಮಣ್ಣ ಪ್ರಸ್ತಾಪಿಸಿಲ್ಲ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*