ರೌಡಿಶೀಟರ್ ಗಳಿಗೆ ಗುಡ್ ನ್ಯೂಸ್: 74 ರೌಡಿಶೀಟರ್ ಗಳ ರೌಡಿಶೀಟರ್ ಕ್ಲೋಸ್

ಭಾಸ್ಕರ ಪತ್ರಿಕೆ
0

ತುಮಕೂರು: ಜಿಲ್ಲೆಯ ಬರೊಬ್ಬರಿ 74 ರೌಡಿಶೀಟರ್ ಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಸನ್ನಡತೆ ಆಧಾರದ ಮೇಲೆ ರೌಡಿಶೀಟರ್ ಕ್ಲೋಸ್ ಮಾಡಲಾಗಿದೆ.

ತುಮಕೂರು ಎಸ್ ಪಿ ಕಚೇರಿ ಬಳಿಯಿರುವ ಡಿಆರ್ ಗ್ರೌಂಡ್ ನಲ್ಲಿ ರೌಡಿಶೀಟರ್ ಸಭೆ ಕರೆದು, 74 ರೌಡಿಶೀಟರ್ ಗಳನ್ನ ರೌಡಿಶೀಟರ್ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ.

ಸಭೆ ಬಳಿಕ ಮಾತನಾಡಿದ  ತುಮಕೂರು ಎಸ್ ಪಿ ಅಶೋಕ್ ಕೆ.ವಿ.  ತುಮಕೂರು ಜಿಲ್ಲೆಯಲ್ಲಿ ಒಟ್ಟು 901 ಜನ ರೌಡಿಶೀಟರ್ ಗಳಿದ್ದಾರೆ.  ಅವರನ್ನ ಪರಿಶೀಲನೆ ಮಾಡಿದಾಗ ಕೆಲ ರೌಡಿಶೀಟರ್ ಗಳು ಕಳೆದ 10 ವರ್ಷಗಳಿಂದ ಯಾವುದೇ ಕೇಸ್ ಗಳಲ್ಲಿ ಭಾಗಿಯಾಗಿರಲಿಲ್ಲ. ಜೊತೆಗೆ ಅವರ ಮೇಲಿದ್ದ ಕೇಸ್ ಗಳು ಕೋರ್ಟ್ ನಲ್ಲಿ ಖುಲಾಸೆಯಾಗಿದ್ದು, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೇ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ರು. ಅಂತವರ ಬಗ್ಗೆ ರಿಪೊರ್ಟ್ ಪಡೆದು ಅವರ ಮೇಲಿದ್ದ ರೌಡಿಶೀಟರ್ ಕ್ಲೋಸ್ ಮಾಡಲಾಗಿದೆ ಎಂದು ತಿಳಿಸಿದರು.

ಇವತ್ತು ಒಟ್ಟು 74 ಜನ ರೌಡಿಶೀಟರ್ ಗಳನ್ನ ರೌಡಿ ಪಟ್ಟಿಯಿಂದ ಮುಕ್ತಾಯ ಮಾಡಲು ತೀರ್ಮಾನ ಮಾಡಲಾಗಿದೆ.  ಹೆದರಿಸೋದು, ಬೆದರಿಸೋದು, ಕ್ರೈಂ ಕೇಸ್ ನಲ್ಲಿ ಭಾಗಿಯಾಗೋದು, ಗ್ಯಾಮ್ಲಿಂಗ್, ಲಿಕ್ಕರ್, ಈತರ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ರೌಡಿಶೀಟರ್ ಓಪನ್ ಮಾಡ್ತಿವಿ ಎಂದರು.

ರೌಡಿಶೀಟರ್ ಮಾಡೋಕೆ ಕಾರಣ ಇರುತ್ತೆ. ಅವರನ್ನು ವಾಚ್ ಮಾಡಿ ರೌಡಿಶೀಟರ್ ತೆರೆಯಲಾಗುತ್ತೆ. ಎಲೆಕ್ಷನ್ ಸಮಯದಲ್ಲಿ ಹಾಗೂ ಗಲಭೆ ಸಮಯದಲ್ಲಿ ಅವರನ್ನ ಗಡಿಪಾರು ಮಾಡ್ತಿವಿ. ಇವತ್ತು ರೌಡಿ ಪಟ್ಟಿಯಿಂದ ಬಿಡುಗಡೆಯಾದವರೆಲ್ಲಾ 10 ವರ್ಷಕ್ಕೂ ಮೇಲ್ಪಟ್ಟು ಯಾವುದೇ ಕ್ರೈಂ ನಲ್ಲಿ ಭಾಗಿಯಾಗದೇ ಇರೋರು. ಇವರು ಮತ್ತೆ ಮನೆಗೆ ಹೋದ ಮೇಲೆ ಕಾನೂನು ಬಾಹಿರವಾಗಿ ನಡೆದುಕೊಂಡ್ರೆ.  ಮತ್ತೆ ಎಫ್ ಐಆರ್ ಮಾಡಿ ರೌಡಿಶೀಟರ್ ಓಪನ್ ಮಾಡ್ತಿವಿ. ರೌಡಿಶೀಟರ್ ಗಳಿಗೆ ಯಾವ ರೀತಿ ಟ್ರೀಟ್ ಮಾಡ್ತಿದ್ದೇವೆ ಅದೇ ರೀತಿ ಮಾಡ್ತಿವಿ ಎಂದು  ಬಾಲಬಿಚ್ಚುವ ರೌಡಿಶೀಟರ್ ಗಳಿಗೆ ತುಮಕೂರು ಎಸ್ ಪಿ.ಎಚ್ಚರಿಕೆ ಕೊಟ್ಟರು.

ಬಾಲಬಿಚ್ಚಿದ್ರೆ ಗಡಿಪಾರು ಮಾಡ್ತಿವಿ.  ರೌಡಿಶೀಟರ್ ಮಾಡೋದೇ ಅವರು ಯಾವುದೇ ಕಾನೂನು ಬಾಹಿರ ಚಟುವಟಿಕೆ ಮಾಡಬಾರದು ಅಂತ.  ನಾವು ಸಾಮಾನ್ಯವಾಗಿ ಗ್ರೌಂಡ್ ವರ್ಕ್ ಮಾಡ್ತಿವಿ. ಇನ್ನು ಗಂಭೀರವಾಗಿದ್ರೆ ನಾವು ಲೋಕಲ್ ತಹಶಿಲ್ದಾರ್, ಎ.ಸಿ ಗೆ ಪತ್ರ ಬರೆದು ಅವರು ಆ ಕ್ಷೇತ್ರದಲ್ಲಿ ಇರದ ಹಾಗೇ ಮಾಡ್ತೀವಿ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*