ಕರ್ನೂಲ್ ಬಳಿ ಕಾರು ಅಪಘಾತ: ಚಿಕ್ಕನಾಯಕನಹಳ್ಳಿ ತಾಲೂಕಿನ ಮೂವರು ಯುವಕರ ಸಾವು

ಭಾಸ್ಕರ ಪತ್ರಿಕೆ
0

ಭಾನುವಾರ ರಾತ್ರಿ 7:30ರ ಸುಮಾರಿಗೆ ಕರ್ನೂಲಿನಲ್ಲಿ ನಡೆದ ಅಪಘಾತ ಕೆಂಕೆರೆ ನವೀನ್- ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರು, ಸಂತೋಷ್ ಕುಮಾರ್- ಪ್ರಥಮ ದರ್ಜೆ ಗುತ್ತಿಗೆದಾರ ಮತ್ತು ಕೆಂಕೆರೆಯವರೇ ಆದ ಲೋಕೇಶ್(ಕಾಮಶೆಟ್ಟಿ) ಈ ಮೂವರು ಮೃತಪಟ್ಟಿರುತ್ತಾರೆ. ಇನ್ನೋವಾ ಕಾರಿನಲ್ಲಿ ಇದ್ದ ಇನ್ನು ಮೂರು ಜನಕ್ಕೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ.

ಭಾನುವಾರ ಮೇ 18ರಂದು ಸಂತೋಷ್ ಅವರ ಹುಟ್ಟುಹಬ್ಬ ಇದ್ದು ಪ್ರಯುಕ್ತ ಮಂತ್ರಾಲಯಕ್ಕೆ ತೆರಳಿದ ಅವರುಗಳು,ಅಲ್ಲಿಂದ ಭಾನುವಾರ ಬೆಳಗ್ಗೆ ಶ್ರೀಶೈಲಕ್ಕೆ ಹೋಗಿ ನಂತರ ಮಹಾನಂದಿ ದರ್ಶನ ಮಾಡಿ ವಾಪಸ್ಸು ಬರುವಾಗ ಆಂಧ್ರದ ಕರ್ನೂಲ್ ಬಳಿ ಅಪಘಾತ ನಡೆದಿದೆ ಎನ್ನಲಾಗಿದೆ. ಒಟ್ಟು 3 ಮಂದಿ ಮೃತಪಟ್ಟಿದ್ದು ಉಳಿದವರಿಗೆ ಗಾಯಗಳಾಗಿದೆ ..FIR ದಾಖಲುಸಿ ಮರಣೋತ್ತರ ಪರೀಕ್ಷೆ ಮುಗಿಸಿ ಸಂಜೆಯ ಸುಮಾರಿಗೆ ಮೃತರನ್ನು ಕೆಂಕೆರೆಗೆ ತರಬಹುದು ಎಂಬ ಮಾಹಿತಿ ಸಧ್ಯಕ್ಕೆ ತಿಳಿದು ಬಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*