ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ: ಇರಾನ್ ನಿಂದ ಮೊದಲ ಪ್ರತಿಕ್ರಿಯೆ

ಭಾಸ್ಕರ ಪತ್ರಿಕೆ
0

ಅಮೆರಿಕ  ಇರಾನ್ ನ ಪ್ರಮುಖ ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ಅಧ್ಯಕ್ಷ ಟ್ರಂಪ್ ಹೇಳಿಕೊಂಡ ಬೆನ್ನಲ್ಲೇ ಭಾನುವಾರ ಇರಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ.

ನಮ್ಮ  ಪರಮಾಣು ತಾಣಗಳಲ್ಲಿ ಯಾವುದೇ ದಾಳಿಯ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದು ಇರಾನ್‌ನ ರಾಷ್ಟ್ರೀಯ ಪರಮಾಣು ಸುರಕ್ಷತಾ ವ್ಯವಸ್ಥೆ ಕೇಂದ್ರ ತಿಳಿಸಿದೆ.

ಇಸ್ಫಹಾನ್, ಫೋರ್ಡೊ ಮತ್ತು ನಟಾಂಜ್‌ನಲ್ಲಿರುವ ತನ್ನ ಪರಮಾಣು ತಾಣಗಳಲ್ಲಿ “ಯಾವುದೇ ಮಾಲಿನ್ಯದ ಲಕ್ಷಣಗಳು ಕಂಡುಬಂದಿಲ್ಲ. ವಿಕಿರಣ ಪತ್ತೆಕಾರಕಗಳು ದಾಳಿಯ ನಂತರ ಕಾಣಿಸಬೇಕಿತ್ತು ಆದರೆ,  ಯಾವುದೇ ವಿಕಿರಣಶೀಲ ಬಿಡುಗಡೆಯಾಗಿಲ್ಲ ಎಂದು ಇರಾನ್ ಹೇಳಿದೆ.

ಇದಲ್ಲದೇ ಪರಮಾಣು ತಾಣದ ಸುತ್ತಲೂ ವಾಸಿಸುತ್ತಿರುವ ನಿವಾಸಿಗಳಿಗೂ ಯಾವುದೇ ಅಪಾಯವಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.

ಭಾನುವಾರ ಯುಎಸ್ ಟೆಹ್ರಾನ್‌ ನ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ಮಾಡುವ ಮೂಲಕ ಇರಾನ್ ವಿರುದ್ಧದ ಇಸ್ರೇಲ್‌ನ ಯುದ್ಧದಲ್ಲಿ ಸೇರಿಕೊಂಡಿದ್ದು, ಸಂಘರ್ಷದಲ್ಲಿ ಮೊದಲ ಬಾರಿಗೆ ಯುಎಸ್ ನೇರ ಮಿಲಿಟರಿ ಭಾಗವಹಿವಹಿಸಿದೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುಎಸ್ ಇಸ್ರೇಲ್ ಪರವಾಗಿ ಸಂಘರ್ಷಕ್ಕೆ ಪ್ರವೇಶಿಸಬೇಕೆ ಎಂದು ನಿರ್ಧರಿಸಲು ಎರಡು ವಾರಗಳಷ್ಟು ಸಮಯ ತೆಗೆದುಕೊಳ್ಳುವುದಾಗಿ ಹೇಳಿದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*