ಇರಾನ್ ಪರಮಾಣು ತಾಣಗಳ ಮೇಲೆ ಅಮೆರಿಕ ಬಾಂಬ್ ದಾಳಿ: ಶಾಂತಿ ಶಾಂತಿ ಎಂದ ಟ್ರಂಪ್

ಭಾಸ್ಕರ ಪತ್ರಿಕೆ
0

ವಾಷಿಂಗ್ಟನ್:  ಅಮೆರಿಕವು ಇರಾನ್‌ ನಲ್ಲಿರುವ ಮೂರು ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ಮಾಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.

ಇಸ್ರೇಲ್‌ ನ ಕಡೆಯಿಂದ ಅಮೆರಿಕ ಸಂಘರ್ಷಕ್ಕೆ ಪ್ರವೇಶಿಸಬೇಕೆ ಎಂದು ನಿರ್ಧರಿಸಲು ಎರಡು ವಾರಗಳಷ್ಟು ಸಮಯ ತೆಗೆದುಕೊಳ್ಳುವುದಾಗಿ ಶುಕ್ರವಾರ ಟ್ರಂಪ್ ಹೇಳಿದ್ದರು. ಈ ನಡುವೆ ಅಮೆರಿಕ ಸೇನೆ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ದಾಳಿ ನಡೆದಿದೆ.

ಅಮೆರಿಕದ ವಿಮಾನಗಳು “ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿವೆ” ಎಂದು ಹೇಳಿದ್ದಾರೆ. 1979 ರಲ್ಲಿ ಇರಾನಿನ ಕ್ರಾಂತಿಯ ನಂತರ ಅಮೆರಿಕವು ಇರಾನ್‌ ಮೇಲೆ ದಾಳಿ ಮಾಡಿರುವುದು ಇದೇ ಮೊದಲು.

ಇರಾನ್‌ನ ಪ್ರಮುಖ ಪರಮಾಣು ತಯಾರಿಕಾ ತಾಣಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. “ಮಧ್ಯಪ್ರಾಚ್ಯದ ಗೂಂಡಾ” ಇರಾನ್ ಈಗ ಶಾಂತಿ ಸ್ಥಾಪಿಸಬೇಕು ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*