ಚಿಕ್ಕಮಗಳೂರು: ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭಾರೀ ಮಳೆಯ ಪರಿಣಾಮ ಶೃಂಗೇರಿ ನೆಮ್ಮಾರ್ ಬಳಿ ಮತ್ತೆ ಗುಡ್ಡ ಕುಸಿತವಾಗಿದೆ.
ಈಗಾಗಲೇ ಜಿಲ್ಲಾಡಳಿತ ಶೃಂಗೇರಿ–ಕಾರ್ಕಳ ರೋಡ್ ಬಂದ್ ಮಾಡಿದೆ. ಗುಡ್ಡ ಕುಸಿಯುವ ಸ್ಥಳದಲ್ಲೇ ಜೆಸಿಬಿ ಬೀಡು ಬಿಟ್ಟಿದ್ದು, ಎನ್.ಎಚ್. ಅಧಿಕಾರಿಗಳು, ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಗುಡ್ಡ ಕುಸಿದಂತೆ ರೋಡ್ ಜಾಮ್ ಮಾಡಿ ಪೊಲೀಸರು, ಅಧಿಕಾರಿಗಳು ಕ್ಲಿಯರ್ ಮಾಡುತ್ತಿದ್ದಾರೆ. 6 ತಿಂಗಳ ನಿರಂತರ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿ ಮತ್ತೆ–ಮತ್ತೆ ಗುಡ್ಡ ಕುಸಿಯುತ್ತಿದೆ.

