ಕಂದಾಯ ದಿನಾಚರಣೆ ಕಾರ್ಯಕ್ರಮ

ಭಾಸ್ಕರ ಪತ್ರಿಕೆ
0

ಕೊಟ್ಟೂರು: ತಾಲೂಕು ಕಛೇರಿ, ಈದಿನ ಕಂದಾಯ ದಿನಾಚರಣೆಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ್.ಜಿ.ಕೆ ಇವರು ಕಂದಾಯ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವಿಕ ನುಡಿಗಳನ್ನು ನುಡಿಯುತ್ತಾ, ಕಂದಾಯ ಇಲಾಖೆಯಲ್ಲಿ ಅನೇಕ ಬದಲಾವಣೆಯಗಳನ್ನು ಮಾಡಿ ಟಿಜಿಟಲೀಕರಣಗೊಳಿಸಲಾಗುತ್ತಿದೆ. ಭೂಸುರಕ್ಷಾ ಯೋಜನೆಯಡಿಯಲ್ಲಿ ಭೂಸುರಕ್ಷಾ ಯೋಜನೆ ಅಡಿ ಅಭಿಲೇಖಾಲಯದ ಕೈಬರಹ ಪಹಣಿ ಹಾಗೂ ಇತರೆ ದಾಖಲೆಗಳನ್ನು ಟಿಜಿಟಲೀಕರಣ ಮಾಡಲಾಗುತ್ತಿದ್ದು, ಈವರೆಗೆ 7,22,218 ಪುಟಗಳಷ್ಟು ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗಿರುತ್ತದೆ. ಜನರಿಗೆ ತ್ವರಿತ ಸೇವೆಯನ್ನು ಮಾಡುತ್ತಾ ಜನರಿಗೆ ಹತ್ತಿರವಾಗಿರುವ ಕಂದಾಯ ಇಲಾಖೆ ಮಾತೃ ಇಲಾಖೆಯಾಗಿದೆ ಎಂದರು. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಕೆ.ನೇಮಿರಾಜನಾಯ್ಕ ರವರು ಕಾರ್ಯಕ್ರವನ್ನು ಉದ್ಘಾಟಿಸಿ ಇತ್ತೀಚಿನ ದಿನಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಮೊಬೈಲ್ ನಲ್ಲಿ ಅನೇಕ ಯ್ಯಾಪ್ಗಳ ಮೂಲಕ ಕಾರ್ಯವನ್ನು ನಿರ್ವಹಿಸಬೇಕಾಗಿರುತ್ತದೆ. ಇವರಿಗೆ ಇದರಿಂದ ತೊಂದರೆಯಾಗುತ್ತಿರುವುದನ್ನು ಅರಿತು ಸರ್ಕಾರದಿಂದ ಲ್ಯಾಪ್ಟಾಪ್ಗಳನ್ನು ನೀಡಲಾಗಿದೆ. ಇದರಿಂದ ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯವನ್ನು ತ್ವರಿತವಾಗಿ ಮಾಡಲು ಅನುಕೂಲವಾಗಲಿದೆ. ಕಂದಾಯ ಇಲಾಖೆಗೆ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಸೌಜನ್ಯಯುತವಾಗಿ ವರ್ತಿಸಿ ಅವರಿಗೆ ಸಹಾಯವನ್ನು ಮಾಡುವಂತೆ ಕಿವಿಮಾತು ಹೇಳಿದರು. ನಂತರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ಗಳನ್ನು ವಿತರಣೆ ಮಾಡಿದರು. ಹಾಗೂ ಭೂಸುರಕ್ಷಾ ಯೋಜನೆ ಅಡಿ ಅಭಿಲೇಖಾಲಯದ ಕೈಬರಹ ಪಹಣಿ ದಾಖಲೆಗಳನ್ನು ಟಿಜಿಟಲೀಕರಣಗೊಳಿಸಿದ ಪ್ರತಿಯನ್ನು ಸಾರ್ವಜನಿಕರಿಗೆ ಸಾಂಕೇತಿಕವಾಗಿ ವಿತರಣೆ ಮಾಡಿದರು ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಬಿ ಆನಂದಕುಮಾರ್, ಭೂಮಾಪನ ಇಲಾಖೆಯ ಎಡಿಎಲ್ಆರ್ ವಿಜಯಕುಮಾರ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಜಿ ಸಿದ್ದಯ್ಯ, ನೌಕರರ ಸಂಘದ ಅಧ್ಯಕ್ಷರಾದ ಯೋಗೀಶ್ವರದಿನ್ನೆ, ಗ್ರೇಡ್-2 ತಹಶೀಲ್ದಾರ್ ಪ್ರತಿಭಾ ಎಂ, ಜಿ ಪಂ ಮಾಜಿ ಸದಸ್ಯರಾದ ಹರ್ಷವರ್ಧನ್ ಕಂದಾಯ ಇಲಾಖೆಯ ಅಧಿಕಾರಿ ನೌಕರರು ಹಾಜರಿದ್ದರು. ದ್ಯಾವಮ್ಮ ಪ್ರಾರ್ಥಿಸಿದರೆ ಕೊಟ್ರಮ್ಮ ಗ್ರಾಆಅ ಸ್ವಾಗತಿಸಿದರು. ಸಿ.ಮ. ಗುರುಬಸವರಾಜ ಇವರು ಕಾರ್ಯಕ್ರಮ ನಿರೂಪಿಸಿದರು. ಈ ಸಮಯದಲ್ಲಿ ನಿವೃತ್ತ ಉಪತಹಶೀಲ್ದಾರ್ ಕೆ ನಾಗರಾಜ ಹಾಗೂ ನಿವೃತ್ತ ಶಿರಸ್ತೇದಾರರು ಶ್ರೀಮತಿ ಲೀಲಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*