ಮಲೆನಾಡಲ್ಲಿ ಮುಂದುವರಿದ ಗಾಳಿ ಮಳೆ ಅಬ್ಬರ: ಮುರಿದು ಬಿದ್ದ ಮರ, ವಿವಿಧೆಡೆ ಜಲಾವೃತ

ಭಾಸ್ಕರ ಪತ್ರಿಕೆ
0

ಚಿಕ್ಕಮಗಳೂರು:   ಕಾಫಿನಾಡ ಮಲೆನಾಡಲ್ಲಿ ರಣ ಗಾಳಿ–ಮಳೆ ಮುಂದುವರಿದಿದೆ. ನಿರಂತರ ಧಾರಾಕಾರ ಮಳೆಗೆ ಶೃಂಗೇರಿಗರ ಜನಜೀವನ ಅಸ್ತವ್ಯಸ್ತವಾಘಿದೆ.

ಶೃಂಗೇರಿ ಜನಸಾಮಾನ್ಯರ ಜೊತೆ ಶಾರದಾಂಬೆ ಭಕ್ತರು ಕಂಗಾಲಾಗಿದ್ದಾರೆ. ತುಂಗಾ ನದಿಯ ಅಬ್ಬರಕ್ಕೆ ಪ್ರವಾಸಿಗರ ಕಾರುಗಳ ಮುಳುಗಡೆಯಾಗಿದೆ.  ಗಾಂಧಿ ಮೈದಾನದಲ್ಲಿ ನಿಂತಿದ್ದ ಪ್ರವಾಸಿಗರ ಕಾರುಗಳು ಜಲಾವೃತವಾಗಿವೆ.

ನಿನ್ನೆ ಬೆಳಗ್ಗೆಯಿಂದಲೂ ಶೃಂಗೇರಿಯಲ್ಲಿ ನಿರಂತರವಾಗಿ ಮಳೆ ಸುರಿದಿದೆ. ಕ್ಷಣ–ಕ್ಷಣಕ್ಕೂ ತುಂಗಾ-ಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ.  ತುಂಗಾ–ಭದ್ರಾ ನದಿಯ ಇಕ್ಕೆಲಗಳ ತೋಟಗಳು ಬಹುತೇಕ ಜಲಾವೃತವಾಗಿದೆ.

ಮಲೆನಾಡ ನಿರಂತರ ಮಳೆಯಿಂದ ಕಾಫಿನಾಡ ಮಲೆನಾಡು ಭಾಗ ಆತಂಕದಲ್ಲಿದೆ. ಶೃಂಗೇರಿ-ಕೊಪ್ಪ-ಮೂಡಿಗೆರೆ-ಕಳಸ-ಎನ್.ಆರ್.ಪುರದಲ್ಲಿ ಭಾರೀ ಗಾಳಿ—ಮಳೆಯಾಗುತ್ತಿದೆ.

ಬೃಹತ್ ಬೃಹತ್ ಮರ: ಮುಳ್ಳಯ್ಯನಗಿರಿ–ದತ್ತಪೀಠ ಮಾರ್ಗದಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರ ಬಿದ್ದಿದೆ. ಬೃಹತ್ ಮರ ಬೀಳುತ್ತಿದ್ದಂತೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.  ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ತೆರೆಳುವ ಮಾರ್ಗ ಮಧ್ಯೆ ಈ ಮರ ಉರುಳಿ ಬಿದ್ದಿದೆ.  ಕೈಮರ ಚೆಕ್ ಪೋಸ್ಟ್ ಬಳಿ ರಸ್ತೆಗೆ ಬಿದ್ದಿರುವ ಮರ–ವಿದ್ಯುತ್ ಕಂಬಗಳಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.  ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸರು, ಸ್ಥಳೀಯರಿಂದ ಮರ ತೆರವು ಕಾರ್ಯ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*