ಜಾತಿಗಣತೀಲಿ ವಿಶ್ವಕರ್ಮ ಎಂದು ಬರೆಸಿ: ಡಾ. ಭಾಸ್ಕರಾಚಾರ್

ಭಾಸ್ಕರ ಪತ್ರಿಕೆ
0

 

ತಿಪಟೂರು: ಜಾತಿಗಣತಿ ಸಮೀಕ್ಷೆ ಸಂದರ್ಭದಲ್ಲಿ ವಿಶ್ವಕರ್ಮ ಎಂದು ಬರೆಯಿಸಬೇಕು. ಯಾವುದೇ ಕಾರಣಕ್ಕೂ ವಿಶ್ವ ಬ್ರಾಹ್ಮಣ, ಹಿಂದೂ ವಿಶ್ವಕರ್ಮ, ಕಮ್ಮಾರ, ಬಡಿಗೇರ ಎಂದು ಬರೆಸದಂತೆ ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಜನಸೇವಾ ಸಂಘ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ. ಭಾಸ್ಕರಾಚಾರ್ ತಿಳಿಸಿದರು.‌

ವಿಶ್ವಕರ್ಮ ಸಮಾಜದಲ್ಲಿ 39 ಉಪಜಾತಿಗಳಿವೆ. ಜಾತಿಯ ಹೆಸರಿನಲ್ಲಿ ಉಪಜಾತಿಗಳನ್ನು ಹಾಕಬಾರದು. ಉಪಜಾತಿಯ ಕಾಲಂನಲ್ಲಿ ಮಾತ್ರ ಉಪಜಾತಿಗಳನ್ನು ಬರೆಸುವಂತೆ ಸೂಚಿಸಲಾಗಿದೆ. ಜಾತಿ ಹೆಸರು ಬರೆಸುವಲ್ಲಿ ಇತರೆಯಾವುದೇ ಸಮಾಜದ ಕೈವಾಡವಿಲ್ಲ. ನಮ್ಮಲ್ಲಿರುವವರೇ ಗೊಂದಲ ಸೃಷ್ಟಿಸಿದ್ದಾರೆ ಎಂದರು. ಕಾನೂನು ಪ್ರಕಾರ ವಿಶ್ವ ಬ್ರಾಹ್ಮಣ ಎನ್ನುವುದು ಜಾತಿಯಿಲ್ಲ. ನಮ್ಮಲ್ಲಿರುವ ವಿಶ್ವ ಬ್ರಾಹ್ಮಣ ಪಂಗಡದವರು ಇದನ್ನು ಬರೆಸೋಣ ಎಂದು ನಿರ್ಧರಿಸಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ತಪ್ಪುಗಳನ್ನು ಮಾಡಬಾರದು ಎಂದು ಜಾಗೃತಿಮೂಡಿಸಲಾಗಿದೆ.ವಿಶ್ವಕರ್ಮರು ಆಚಾರ  ವಿಚಾರಗಳಲ್ಲಿ ಬ್ರಾಹ್ಮಣರಿಗೆ ಮತ್ತು ಹೋಲಿಕೆಯಿದೆ. ವೈದಿಕ ಶಿಲ್ಪಶಾಸ್ತ್ರದಲ್ಲಿ ನಮ್ಮ ಸಮಾಜವಿದೆ. ಜಾತಿ ಗಣತಿ ವರದಿಯನ್ನು ಸ್ವೀಕರಿಸುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡಿದ ಮೊದಲ ವ್ಯಕ್ತಿ ನಾನು. ವರದಿಯಲ್ಲಿ ಏನಾದರೂ ತಪ್ಪುಗಳಿದ್ದರೆ ಸರಿಪಡಿಸುವ ಕೆಲಸ ಮಾಡಬಹುದು ಎನ್ನುವ ಅಭಿಪ್ರಾಯವಾಗಿತ್ತು. 

ಈ ವರದಿಯನ್ನು ನಾವಷ್ಟೇ ಅಲ್ಲ ಯಾರೂ ಕೂಡ ಒಪ್ಪುವುದಿಲ್ಲ, ಜಾಗೃತಸಮಾಜಗಳು ಇದರಲ್ಲಿ ಗೆಲ್ಲುತ್ತಾರೆ. ಆದರೆ ನಮ್ಮಂತಹ ಸಣ್ಣ ಸಮಾಜಗಳು ಕಳೆದುಹೋಗುತ್ತವೆ. ಎಲ್ಲಾ ಸಮಾಜಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ನನ್ನ ಕಳಕಳಿಯಾಗಿದೆ ಎಂದರು.

ಪುತ್ತೂರಿನಲ್ಲಿ ನಮ್ಮ ಸಮಾಜದ ಹೆಣ್ಣು ಮಗಳಿಗೆ ನಂಬಿಸಿ ಮೋಸ ಮಾಡಿದ ಯುವಕನೊಬ್ಬ ಮಗುವನ್ನು ನೀಡಿದ್ದಾನೆ. ಇದೀಗ ಆ ಯುವಕ ಜೈಲಿನಲ್ಲಿದ್ದು, ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಸಮಾಜದಿಂದ ಅಗತ್ಯ ನೆರವು ನೀಡುವುದು ಹಾಗೂ ಹೊರಬಂದ ಮೇಲೆ ಕಾನೂನು ಪ್ರಕಾರ ಆ ಯುವಕನ ಜೊತೆಗೆ ಮದುವೆ ಮಾಡಿಸಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*