ನಾಲ್ಕು ತಿಂಗಳುಗಳಿಂದ ಭೀತಿ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ

ಭಾಸ್ಕರ ಪತ್ರಿಕೆ
0

ತಿಪಟೂರು:  ಕಳೆದ ನಾಲ್ಕು ತಿಂಗಳಿನಿಂದ ಗ್ರಾಮಸ್ಥರಲ್ಲಿ ಭಯಭೀತಿಗೊಳಿಸಿದ್ದ ಚಿರತೆ ಬೆಳಗಿನ ಜಾವ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿರುವ ಘಟನೆ ಕರಿಕೆರೆ ಮಜುರೆ  ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸುತ್ತಮುತ್ತಲು ಜನಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಮೂರು ಚಿರತೆಗಳ ಪೈಕಿ ಒಂದು ಚಿರತೆ, ಬೋನಿಗೆ ಬಿದ್ದಿದೆ.

ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆಯು ಅಂಚೆಕೊಪ್ಪಲು ಗ್ರಾಮದ ತೋಟದ ಸಾಲಿನಲ್ಲಿ ಬೋನನ್ನು ಇಡಲಾಗಿತ್ತು. ಆದರೆ ಸುಮಾರು ನಾಲ್ಕೈದು ದಿನ ಆದರೂ ಚಿರತೆಯ ಬೋನಿಗೆ ಬಿದ್ದಿರಲಿಲ್ಲ. ಇದರಿಂದಾಗಿ ಗ್ರಾಮಸ್ಥರು ಬೊನನ್ನು  ಗ್ರಾಮದೊಳಗೆ ತಂದು ಇಟ್ಟಿದ್ದರು. ಮೂರು ದಿನಗಳ ನಂತರ ಇಂದು ಬೆಳಗಿನ ಜಾವ ಚಿರತೆ ಸೆರೆಯಾಗಿದೆ.

ಚಿರತೆ ಬಿದ್ದ ಬೋನಿಗೆ ಸುತ್ತಮುತ್ತಲಿನ  ಗ್ರಾಮದ ಗ್ರಾಮಸ್ಥರು ಬೆಳಗ್ಗೆಯಿಂದಲೇ ಚಿರತೆಯನ್ನು ನೋಡಲು ಸಾಗರೋಪಾದಿಯಲ್ಲಿಆಗಮಿಸಿದ್ದರು.

ಇನ್ನೂ ಎರಡು ಚಿರತೆಗಳು ಜನರ ಕಣ್ಣಿಗೆ ಕಂಡಿದ್ದು ಹಾಗಾಗಿ ಭಯದ ವಾತಾವರಣವು ಸಹ ಮೂಡಿದೆ.  ಟಗರು ಕುರಿ ಬಾತುಕೋಳಿ ಕೋಳಿಯನ್ನು ತಿಂದಿದ್ದ ಚಿರತೆ ದಾಳಿಯಿಂದ  ಗ್ರಾಮಸ್ಥ ಮಂಜುನಾಥ್ ಎಂಬವರಿಗೆ 50 ಸಾ.ರೂ. ಇದುವರೆಗೂ ನಷ್ಟ ಸಂಭವಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*