ಖ್ಯಾತ ಕನ್ನಡದ ಹಿರಿಯ ತಾರೆ ಬಿ ಸರೋಜಾ ದೇವಿ (87) ಅವರಿಗೆ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತುಮಕೂರು ಮತ್ತು ತಿಪಟೂರು ಶಾಖೆಯ ಪದಾಧಿಕಾರಿಗಳ ಭಾವಪೂರ್ಣ ಶ್ರದ್ಧಾಂಜಲಿ

ಭಾಸ್ಕರ ಪತ್ರಿಕೆ
0

ತಿಪಟೂರು: ಇಂದು ವಿಧಿವಶರಾದ ಖ್ಯಾತ ಕನ್ನಡದ ಹಿರಿಯ ತಾರೆ ಬಿ ಸರೋಜಾ ದೇವಿ (87) ಅವರಿಗೆ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತುಮಕೂರು ಜಿಲ್ಲಾ ಮತ್ತು ತಿಪಟೂರು ತಾಲೂಕ್ ಶಾಖೆಯ ಪದಾಧಿಕಾರಿಗಳು ತಿಪಟೂರು ಹಾಸನ ವೃತ್ತದಲ್ಲಿರುವ ನಂದಿನಿ ಆವರಣದಲ್ಲಿ ವಿಧಿವಶರಾದ ಬಿ ಸರೋಜಾ ದೇವಿಯವರಿಗೆ ಭಾವಪೂರ್ಣ  ಶ್ರದ್ಧಾಂಜಲಿಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಗೌರವಾಧ್ಯಕ್ಷರಾದ, ಭಾಸ್ಕರ್ ಪತ್ರಿಕೆ ಮತ್ತು ಭಾಸ್ಕರ್ ಯುಟ್ಯೂಬ್ ಚಾನೆಲ್  ಸಂಪಾದಕರು ಆದ ಡಾಕ್ಟರ್ ಭಾಸ್ಕರ್ ಮಾತನಾಡಿ ಬಿ ಸರೋಜಾ ದೇವಿಯವರು ಕನ್ನಡ ನಾಡಿನ ಹಿರಿಯ ಹೆಸರಾಂತ ಕಲಾವಿದರಲ್ಲೊಬ್ಬರು ಅವರು ನಟಿಸಿದಂತ ಕನ್ನಡ ಸಿನಿಮಾಗಳು ತುಂಬಾ ಖ್ಯಾತಿಯನ್ನು ಪಡೆದು ಜನಮನ್ನಣೆ ಗಳಿಸಿವೆ ಕನ್ನಡದ ಕಲಾಭಿಮಾನಿಗಳ ಹೃದಯ ಅಂತರಾಳದಲ್ಲಿ ಗಟ್ಟಿಯಾಗಿ ನೆಲೆಯೂರಿದ ಒಬ್ಬ ಹಿರಿಯತಾರೆಯನ್ನು ಕಳೆದುಕೊಂಡ ಚಿತ್ರರಂಗ ಅಪಾರ ನಷ್ಟವನ್ನು ಅನುಭವಿಸಿದೆ ಕನ್ನಡದ ಮೇರು ನಟ   ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ಅವರ ಅನೇಕ ಸಿನಿಮಾಗಳಲ್ಲಿ ನಟಿಸಿ ತುಂಬಾ ಖ್ಯಾತಿಯನ್ನು ಹೊಂದಿದ್ದರು . ಎಂದು ತಿಳಿಸಿದರು ಈ ಸಂದರ್ಭದಲ್ಲಿ ತಿಪಟೂರು ತಾಲೂಕು ಶಾಖೆ ಅಧ್ಯಕ್ಷರಾದ ಟಿ ರಾಜು ಬೆಣ್ಣೆನಹಳ್ಳಿ, ಧರಣೇಶ್ ಕುಪ್ಪಾಳು, ಸರ್ವೇಶ ಆಚಾರ್, ಕಿರಣ್, ಡಿ ಮಂಜುನಾಥ್ ಹಾಲ್ಕುರಿಕೆ ಇನ್ನು ಮುಂತಾದವರು ಆಗಮಿಸಿ ಮೃತರ ಆತ್ಮಕ್ಕೆ ಒಂದು ನಿಮಿಷದ ಮೌನ ಆಚರಣೆಯನ್ನು ಸಲ್ಲಿಸುವುದರ ಮುಖಾಂತರ ಶ್ರದ್ಧಾಂಜಲಿಯನ್ನು ಕೋರಲಾಯಿತು.

ವರದಿ: ಟಿ ರಾಜು ಬೆಣ್ಣೆನಹಳ್ಳಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*