ಕಾಡಿನಲ್ಲಿ ಕೆರೆ ಒಡೆದು ಕಾಫಿತೋಟ ಜಲಾವೃತ

ಭಾಸ್ಕರ ಪತ್ರಿಕೆ
0

ಚಿಕ್ಕಮಗಳೂರು: ಕಾಡಿನಲ್ಲಿ ಕೆರೆ ಒಡೆದ ಪರಿಣಾಮ ಕಾಫಿತೋಟ ಜಲಾವೃತಗೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹೊನ್ನೇಕೊಪ್ಪ ಗ್ರಾಮದಲ್ಲಿ ನಡೆದಿದೆ.

ನಿನ್ನೆ ಸಂಜೆ ತೋಟ ನೋಡಿ ಮನೆಗೆ ಹೋಗಿದ್ದ ಮಾಲೀಕ ಚಂದ್ರು, ಬೆಳಗ್ಗೆ ಬರುವಷ್ಟರಲ್ಲಿ ತೋಟದ ಸಂಪೂರ್ಣ ಚಿತ್ರಣವೇ ಬದಲಾಗಿದೆ. ನೀರು ಹರಿದಿರೋ ರಭಸಕ್ಕೆ ತೋಟದಲ್ಲಿ ಅಡಿಗಟ್ಟಲೇ ಹೊಂಡ ಸೃಷ್ಟಿಯಾಗಿದೆ.

ಸುಮಾರು ಒಂದೂವರೆ ಎಕರೆ ವಿಸ್ತೀರ್ಣದ ಕೆರೆ ಒಡೆದು ಅನಾಹುತ ಸೃಷ್ಟಿಯಾಗಿದೆ.  ತೋಟದ ಮೇಲ್ಭಾಗದ ಕಾಡಿನಲ್ಲಿ ಇದ್ದ ಬೃಹತ್ ಕೆರೆ  ನಿರಂತರ ಮಳೆಯಿಂದ ತುಂಬಿತ್ತು.  ಕೆರೆ ತೂಬಿನಲ್ಲಿ ಕಸ ಕಟ್ಟಿ ತೇವಾಂಶ ಹೆಚ್ಚಾಗಿ ಕೆರೆ ಒಡೆದಿರಬಹುದು ಎಂದು ಶಂಕಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಹೊನ್ನೇಕೊಪ್ಪದಲ್ಲಿ ಈ ಘಟನೆ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*