ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಪಿತೂರಿ: ಮನುಗನಹಳ್ಳಿ ಗುರುಸ್ವಾಮಿ ಆರೋಪ

ಭಾಸ್ಕರ ಪತ್ರಿಕೆ
0

ಸರಗೂರು:  ಶಾಸಕ ಅನಿಲ್ ಚಿಕ್ಕಮಾದುರವರ ವಿರುದ್ಧ ವಿರೋಧ ಪಕ್ಷದ ಮುಖಂಡರು ಅಭಿವೃದ್ಧಿ ಕೆಲಸ ನೋಡೋಕೆ ಆಗದೇ ಇತರ ಪಿತ್ತೂರಿ ನಡೆಸುತ್ತಿದ್ದಾರೆ ಎಂದು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರದಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ ತಿಳಿಸಿದರು.

ವಿರೋಧ ಪಕ್ಷದ ನಾಯಕ ಮತ್ತು ಮುಖಂಡರು ಸಾರ್ವಜನಿಕರಿಗೆ ಶಾಸಕರ ವಿರುದ್ಧ ಲೋಕಲ್ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ.  ಆದರೆ ಜನರಿಗೆ ಸತ್ಯಾಂಶ ಗೊತ್ತಿಲ್ಲ. ಗೊತ್ತಾಗಿದರೆ ಶಾಸಕರ ವಿರುದ್ಧ ಮಾತನಾಡುವುದಿಲ್ಲ.

ತಾಲೂಕಿನ ಕಬಿನಿ, ತಾರಕ, ನುಗು ಜಲಾಶಯಗಳ ಹಿನ್ನೀರು ಪ್ರದೇಶಗಳಲ್ಲಿ ರೆಸಾರ್ಟ್ ರಾಜಕೀಯ ನಾಯಕರಿಗೆ ಮಾಡಿಸಿಕೊಂಡಿದ್ದಾರೆ ಎಂದು ಜಾಲತಾಣ ಮತ್ತು ಮಾಧ್ಯಮಗಳು ವರದಿ ಮಾಡಿದ್ದಾರೆ. ಅವುಗಳಲ್ಲಿ ಯಾವುದೇ ಸತ್ಯಾಂಶ  ದಾಖಲೆಗಳು ಇಲ್ಲದೆ ಶಾಸಕರ ವಿರೋಧಿಗಳು ಆರೋಪ ಮಾಡಿದ್ದಾರೆ ಅಷ್ಟೇ. ತಾಲೂಕಿನ ಬಗ್ಗೆ ಎಲ್ಲಾ ಸಮುದಾಯದ ಪ್ರತಿ ಒಂದು ಗ್ರಾಮಗಳಿಗೆ ಭೇಟಿ ನೀಡಿ ಕೇಳಿದರೂ ನಮ್ಮ ಶಾಸಕ ಅನಿಲ್ ಚಿಕ್ಕಮಾದು ರವರ ಬಗ್ಗೆ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಹೇಳುತ್ತಾರೆ. ನಮ್ಮ ತಾತಾ ಮುತ್ತಾತ ಕಾಲದಿಂದಲೂ ನಮಗೆ ಜಮೀನುಗಳಿಗೆ ಹೋಗಲು ರಸ್ತೆಗಳು ಹಾಗೂ ಸಾಗುವಾಳಿ ಪತ್ರ ಮಾಡಿರಲಿಲ್ಲ. ಅದರೆ ನಮ್ಮ ಶಾಸಕರು ಮಾಡಿಕೊಂಡಿದ್ದಾರೆ. ಅವರ ಪೋಟೋವನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಜನರು ತಿಳಿಸಿದರು.

ಎಷ್ಟೋ ವರ್ಷಗಳಿಂದ ಸುಮಾರು ಗ್ರಾಮಗಳಲ್ಲಿ ರಸ್ತೆಯನ್ನೇ ಕಾಣದೆ ಇರುವಾಗ ಅವರು ಗ್ರಾಮಗಳಿಗೆ ಭೇಟಿ ನೀಡಿ ಎಲ್ಲಾ ಇಲಾಖೆ ಅಧಿಕಾರಿಗಳು ಸಮ್ಮುಖದಲ್ಲಿ ರಸ್ತೆ ಬಿಡಿಸಿದ್ದಾರೆ. ಕಬಿನಿ ಜಲಾಶಯದ ಮುಳುಗಡೆಯಾದ ಸಂದರ್ಭದಲ್ಲಿ ಜನರಿಗೆ ಹಕ್ಕುಪತ್ರ ನೀಡಿರಲಿಲ್ಲ. ಆದರೆ ಅವರ ಅವಧಿಯಲ್ಲಿ ಜಾಗ ಮತ್ತು ಹಕ್ಕು ಪತ್ರವನ್ನು ವಿತರಣೆ ಮಾಡಿದ್ದಾರೆ. ಬೆಟ್ಟ ಗುಡ್ಡಗಳಲ್ಲಿ ವಾಸವಾಗಿದ್ದು, ಜನರಿಗೆ ಸ್ಥಳಾಂತರ ಮಾಡಿ ಜಾಗವನ್ನು ಗುರುತಿಸಿ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನೆಯನ್ನು ಕಟ್ಟಲು ಅನುಕೂಲ ಮಾಡಬೇಕು ಸೂಚನೆ ನೀಡಲಾಗಿದೆ ಎಂದರು.

ನಮ್ಮ ಶಾಸಕರ ವಿರುದ್ಧ ಯಾರೇ ಮಾತನಾಡಿಕೊಂಡು ಬೀದಿಗಳಲ್ಲಿ ತಿರುಗಾಡಲಿ ಅವರು ನಾವು ಶಾಸಕರ ಜೊತೆಗೊಡಿ  ತಾಲೂಕಿನ ಅಭಿವೃದ್ಧಿಗೆ ಹೋಗೋಣ ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು.

ವರದಿ: ಹಾದನೂರು ಚಂದ್ರ


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

The post ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಪಿತೂರಿ: ಮನುಗನಹಳ್ಳಿ ಗುರುಸ್ವಾಮಿ ಆರೋಪ appeared first on nammatumakuru.



from nammatumakuru https://ift.tt/qT2u6tP

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*