ತಿಪಟೂರು: ಶ್ರೀ ಕಾಳಮ್ಮನವರ ಬೆಟ್ಟದಲ್ಲಿ ಕರ್ನಾಟಕದ ಎಲ್ಲಾ ಭಾಗಗಳಿಂದ ವಿಶ್ವಕರ್ಮ ಸಮಾಜದ ಭಕ್ತಾದಿಗಳು ಪ್ರತಿದಿನವೂ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಈ ದೇವಾಲಯವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರು ಸಹ ಮೂಲ ಸೌಕರ್ಯಗಳಿಲ್ಲದೆ ಭಕ್ತಾದಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು. ಹಾಗಾಗಿ ಇದನ್ನೆಲ್ಲ ಗಮನಿಸಿದ ವಿಶ್ವಕರ್ಮ ಸಮಾಜ ಹಾಗು ರೈತ ಮುಖಂಡರಿಂದ ತಿಪಟೂರು ದಂಡಾಧಿಕಾರಿಯಾದ ಮೋಹನ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ನಂತರ ವಿಶ್ವಕರ್ಮ ಸಮಾಜದ ಮುಖಂಡರಾದ ಸರ್ವೇಶ ಮಾತನಾಡಿ ಶ್ರೀ ಕ್ಷೇತ್ರ ಕಾಳಮ್ಮನವರ ಬೆಟ್ಟದ ಮೂಲಸೌಕರ್ಯ ಸಮಸ್ಯೆ ಬಗ್ಗೆ ಸುಮಾರು ವರ್ಷಗಳಿಂದ ಹಲವಾರು ಬಾರಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು ಯಾವುದೇ ರೀತಿ ಉಪಯೋಗವಾಗಿಲ್ಲ. ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ. ಭಕ್ತಾದಿಗಳು ಅರಕೆ ರೂಪದಲ್ಲಿ ನೀಡುತ್ತಿರುವ ಉಡುಗೊರೆಗಳಿಗೆ ಭದ್ರತೆಗಳಿಲ್ಲದೆ ಕಳ್ಳತನವಾಗುತ್ತಿದೆ. ಇದಕ್ಕೆ ಭದ್ರತೆಯಾಗಿ ಒದಗಿಸಿಕೊಡಿ. ದೇವಲದಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಲು ಸರ್ಕಾರದ ವತಿಯಿಂದ ಮೇಲ್ಚಾರಕರನ್ನು ನೇಮಿಸುವ ವ್ಯವಸ್ಥೆ.
ಶ್ರೀ ಕಾಳಮ್ಮನ ಬೆಟ್ಟದಲ್ಲಿ ಜಾತ್ರೆಯಲ್ಲಿ ದೇವರು ಉತ್ಸವಮೂರ್ತಿಗೆ ಉಡುಗೊರೆಯಾಗಿ ನೀಡಿರುವ ಹಿತ್ತಾಳೆ ಲೋಹದ ಆನೆಯ ಭದ್ರತೆಯಿಲ್ಲದೆ ಕಳ್ತನವಾಗಿದೆ. ಈ ವಿಚಾರವನ್ನು ಪೋಲಿಸ್ ಇಲಾಖೆ ಹಾಗು ತಹಸೀಲ್ದಾರ್ ರವರ ಗಮನಕ್ಕೆ ತಂದಿದ್ದು ಯಾವುದೇ ರೀತಿ ಸೂಕ್ತ ಕ್ರಮ ಕೈಗೊಂಡಿಲ್ಲ. ದೇವಾಲಯದ ಉತ್ಸವ ಮೂರ್ತಿ ಹಿತ್ತಾಳೆಯ ಆನೆಯನ್ನು ಪುನಹ ಮಾಡಿಸಿಕೊಡಬೇಕು. ಅರಕೆ ರೂಪದಲ್ಲಿ ನೀಡಿರುವ ಚಿನ್ನ ಮತ್ತು ಬೆಳ್ಳಿ ಒಡವೆಗಳಿಗೆ ಭದ್ರತೆ ಒದಗಿಸುವ ಬಗ್ಗೆ ಮಾಹಿತಿ. ಶುಭ ಸಮಾರಂಭಗಳಿಗೆ ಇತ್ಯಾದಿ ಕಾರ್ಯಕ್ರಮಗಳಿಗೆ ಒಂದು ಸಮುದಾಯ ಭವನ ವಸತಿಗೃಹ ಅವಶ್ಯಕತೆ ಇದೆ ಈ ಸಂದರ್ಭದಲ್ಲಿ ಬಳುವ ನೆರಳು ಗ್ರಾಮ ಪಂಚಾಯಿತಿ ಸದಸ್ಯ ಸಿದ್ದೇಶ್, ವಿಶ್ವಕರ್ಮ ಸಮಾಜದ ಮುಖಂಡರಾದ ಸರ್ವೆ ಚಾರ್, ಭಾಸ್ಕರ್ ಚಾರ್ . ಸ್ವಾಮಿ ಕೆಂಪಾಚಾರ್ , ಉಮೇಶ್ ಮರಿ ಚಾರ್, ಕೈದಾಳು ಮಂಜುನಾಥ, ಇನ್ನು ಮುಂತಾದವರು ಉಪಸ್ಥಿತಿಯಲ್ಲಿದ್ದುರೂ
ವರದಿ:ಮಂಜುನಾಥ್ ಡಿ, ತಿಪಟೂರು
