ಅ.ಭಾ.ಸಾ.ಪ ವತಿಯಿಂದ ಗಂಡುಗಲಿ ಕುಮಾರರಾಮನ ಜಯಂತಿ ಅಂಗವಾಗಿ ಉಪನ್ಯಾಸ

ಭಾಸ್ಕರ ಪತ್ರಿಕೆ
0
ಗಂಗಾವತಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಗಂಗಾವತಿ ಸಮಿತಿಯಿಂದ ಆಗಸ್ಟ್-೦೯ ಶನಿವಾರ ಗಂಡುಗಲಿ ಕುಮಾರಾಮನ ಜಯಂತಿ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಅಂದು ಬೆಳಗ್ಗೆ ೧೧:೩೦ಕ್ಕೆ ವಡ್ಡರಹಟ್ಟಿಯ ಕೆ.ಎಲ್.ಇ ಸಂಸ್ಥೆಯ ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿಯಾದ ಯಲ್ಲಪ್ಪ ಕಲಾಲ್ ಪ್ರಕಟಣೆಯಲ್ಲಿ ತಿಳಿಸಿದರು. ಸದರಿ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಡಾ. ಮಾನಸಾ ಡಿ.ಎ ಅವರು ಮಾಡಲಿದ್ದು, ಅ.ಭಾ.ಸಾ.ಪ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಅಶೋಕ ರಾಯಕರ್‌ರವರು ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅ.ಭಾ.ಸಾ.ಪ ಗಂಗಾವತಿ ತಾಲೂಕು ಸಮಿತಿಯ ಅಧ್ಯಕ್ಷರಾದ ಜಡೆಪ್ಪ ಮೆಟ್ರಿ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅ.ಭಾ.ಸಾ.ಪ ಬಳ್ಳಾರಿ ವಿಭಾಗ ಸಂಯೋಜಕರಾದ ಟಿ. ಶ್ರೀಧರ ಶಿಕ್ಷಕರು, ಕೊಪ್ಪಳ ಜಿಲ್ಲಾ ಉಪಾಧ್ಯಕ್ಷರಾದ ಯಂಕಪ್ಪ ಕಟ್ಟಿಮನಿ, ಜಿಲ್ಲಾ ಕಾರ್ಯದರ್ಶಿ ಶರಣಪ್ಪ ತಳ್ಳಿ, ಗಂಡುಗಲಿ ಕುಮಾರರಾಮ ವಂಶಸ್ಥರಾದ ರಾಜೇಶ್ ನಾಯಕ ದೊರೆ, ಅಖಿಲ ಕರ್ನಾಟಕ ಹಕ್ಕಬುಕ್ಕ ನಾಯಕ ವೇದಿಕೆಯ ಹರನಾಯಕ ಉಪಸ್ಥಿತರಿರಲಿದ್ಧಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು, ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*